ADVERTISEMENT

ಉನ್ನಾವ್‌ ಪ್ರಕರಣ: ಏಮ್ಸ್‌ನಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲು

ಪಿಟಿಐ
Published 11 ಸೆಪ್ಟೆಂಬರ್ 2019, 20:15 IST
Last Updated 11 ಸೆಪ್ಟೆಂಬರ್ 2019, 20:15 IST
   

ನವದೆಹಲಿ :ಉನ್ನಾವ್‌ ಅತ್ಯಾಚಾರ ಸಂತ್ರಸ್ತೆಯ ಹೇಳಿಕೆ ಯನ್ನುಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್‌) ಸ್ಥಾಪಿಸಲಾದ ತಾತ್ಕಾಲಿಕ ಕೋರ್ಟ್‌ ಬುಧವಾರ ದಾಖಲಿಸಿಕೊಂಡಿದೆ.

ತಾತ್ಕಾಲಿಕ ಕೋರ್ಟ್‌ನ ಕಲಾಪ ಸಂಪೂರ್ಣ ಗೋಪ್ಯವಾಗಿ ನಡೆಯಿತು. ಜಿಲ್ಲಾ ನ್ಯಾಯಾಧೀಶ ಧರ್ಮೇಶ್‌ ಶರ್ಮಾ ಅವರು ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡರು.

ಏಮ್ಸ್‌ನ ಜೈಪ್ರಕಾಶ್‌ ನಾರಾಯಣ್‌ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಸ್ಥಾಪಿಸಲಾಗಿರುವ ತಾತ್ಕಾಲಿಕ ಕೋರ್ಟ್‌ಗೆ ಬಿಜೆಪಿ ಉಚ್ಚಾಟಿತ ಶಾಸಕ, ಆರೋಪಿ ಕುಲದೀಪ್ ಸಿಂಗ್‌ ಸೆಂಗರ್ ಹಾಗೂ ಸಹ ಆರೋಪಿ ಶಶಿ ಸಿಂಗ್‌ನನ್ನು ಕರೆತರಲಾಗಿತ್ತು.

ADVERTISEMENT

ಜುಲೈ 28ರಂದು ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯ ಗೊಂಡಿರುವ ಸಂತ್ರಸ್ತೆ ಚಿಕಿತ್ಸೆಗಾಗಿ ಏಮ್ಸ್‌ಗೆ ದಾಖಲಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.