ADVERTISEMENT

ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ ಸೆಂಗರ್‌ಗೆ ಮಧ್ಯಂತರ ಜಾಮೀನು

ಪಿಟಿಐ
Published 5 ಡಿಸೆಂಬರ್ 2024, 13:08 IST
Last Updated 5 ಡಿಸೆಂಬರ್ 2024, 13:08 IST
ಕುಲದೀಪ್‌ ಸಿಂಗ್‌ ಸೆಂಗರ್‌
ಕುಲದೀಪ್‌ ಸಿಂಗ್‌ ಸೆಂಗರ್‌   

ನವದೆಹಲಿ: ಉನ್ನಾವೊ ಅತ್ಯಾಚಾರ ಪ್ರಕರಣದ ಅಪರಾಧಿ, ಬಿಜೆಪಿಯ ಉಚ್ಚಾಟಿತ ನಾಯಕ ಕುಲದೀಪ್‌ ಸಿಂಗ್‌ ಸೆಂಗರ್‌ಗೆ ವೈದ್ಯಕೀಯ ಕಾರಣಗಳಿಗಾಗಿ ದೆಹಲಿ ಹೈಕೋರ್ಟ್‌ ಎರಡು ವಾರಗಳ ಮಧ್ಯಂತರ ಜಾಮೀನು ನೀಡಿದೆ.

‘ದೆಹಲಿಯ ಏಮ್ಸ್‌ಗೆ ದಾಖಲಾಗಬೇಕು’ ಎಂದು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ. ಸಿಂಗ್‌ ಹಾಗೂ ಅಮಿತ್‌ ಶರ್ಮಾ ಅವರಿದ್ದ ಪೀಠ  ಹೇಳಿದೆ. ಕುಲದೀಪ್‌ ಆರೋಗ್ಯ ಸ್ಥಿತಿಯ ಕುರಿತು ವರದಿ ನೀಡುವಂತೆ ನ್ಯಾಯಾಲಯ ಏಮ್ಸ್‌ಗೆ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ಡಿ.20ಕ್ಕೆ ಮುಂದೂಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT