ADVERTISEMENT

ಮನೆ ನೆಲಸಮ: ಸುಪ್ರೀಂ ಕೋರ್ಟ್ ವಿಚಾರಣೆ ಇಂದು

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 19:45 IST
Last Updated 15 ಜೂನ್ 2022, 19:45 IST
   

ನವದೆಹಲಿ: ಪ್ರವಾದಿ ಮಹಮ್ಮದ್‌ ನಿಂದನೆ ವಿರೋಧಿಸಿಉತ್ತರ ಪ್ರದೇಶದಲ್ಲಿ ಗಲಭೆ ನಡೆಸಿದವರಿಗೆ ಸೇರಿದ ಮನೆಗಳನ್ನು ಧ್ವಂಸಗೊಳಿಸುವ ಮೊದಲು ಉತ್ತರ ಪ್ರದೇಶ ಸರ್ಕಾರವು ನಿಯಮಗಳನ್ನು ಪಾಲಿಸಬೇಕು. ಜೊತೆಗೆ, ಕಾನೂನು ಬಾಹಿರವಾಗಿ ಕಟ್ಟಡ ನೆಲಸಮ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಗುರುವಾರ ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಜಮೈತ್‌ ಉಲಾಮ–ಐ–ಹಿಂದ್‌ ಎಂಬಮುಸ್ಲಿಂ ಸಂಘಟನೆ ಈ ಅರ್ಜಿ ಸಲ್ಲಿಸಿತ್ತು.ಈ ರೀತಿ ಕಾನೂನೇತರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸಹಜ ನ್ಯಾಯದ ಉಲ್ಲಂಘನೆ ಆಗುತ್ತದೆ. ಅದರಲ್ಲೂ ಪ್ರಕರಣದ ವಿಚಾರಣೆಯನ್ನು ಕೋರ್ಟ್‌ ನಡೆಸುತ್ತಿರುವಾಗ ಈ ರೀತಿಯ ಕ್ರಮ ತೆಗೆದುಕೊಳ್ಳುವುದು ಕಾನೂನು ಉಲ್ಲಂಘನೆ ಆಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

ಗಲಭೆಯ ಮುಖ್ಯ ಆರೋಪಿ, ವೆಲ್‌ಫೇರ್‌ ಪಾರ್ಟಿ ಆಫ್‌ ಇಂಡಿಯಾದ ನಾಯಕ ಜಾವೇದ್‌ ಮೊಹಮ್ಮದ್‌ ಸೇರಿ ಗಲಭೆಯ ಹಲವು ಆರೋಪಿಗಳಿಗೆ ಸೇರಿರುವ ಅಕ್ರಮಕಟ್ಟಡಗಳನ್ನು ನೆಲಸಮ ಮಾಡುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶ ನೀಡಿದ್ದರು. ಅದರಂತೆ ಸ್ಥಳೀಯ ಆಡಳಿತಗಳು ಬುಲ್ಡೋಜರ್ ಬಳಿಸಿ ಆರೋಪಿಗಳ ಮನೆಗಳನ್ನು ನೆಲಸಮ ಮಾಡಿದ್ದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.