ADVERTISEMENT

ಬಿಜೆಪಿಯ ಗೆಲುವಿನ ಸಂಖ್ಯೆ ಕಡಿಮೆ ಮಾಡಿದ್ದೇವೆ: ಅಖಿಲೇಶ್ ಯಾದವ್

ಐಎಎನ್ಎಸ್
Published 11 ಮಾರ್ಚ್ 2022, 7:57 IST
Last Updated 11 ಮಾರ್ಚ್ 2022, 7:57 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಲಖನೌ: ಬಿಜೆಪಿಯ ಗೆಲುವಿನ ಕ್ಷೇತ್ರಗಳನ್ನು ಕಡಿಮೆ ಮಾಡಬಹುದು ಎಂಬುದನ್ನು ತಮ್ಮ ಪಕ್ಷ ಸಾಧಿಸಿ ತೋರಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಸಾಧನೆ ಕುರಿತು ಅವರು ಪ್ರತಿಕ್ರಿಯಿಸಿದರು.

ಸಮಾಜವಾದಿ ಪಕ್ಷವು 111 ಸ್ಥಾನಗಳನ್ನು ಗೆಲ್ಲುವುದರೊಂದಿಗೆ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಸ್‌ಪಿ ನೇತೃತ್ವದ ಮೈತ್ರಿಯು 125 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಇದರಲ್ಲಿ ರಾಷ್ಟ್ರೀಯ ಲೋಕದಳ 8 ಮತ್ತು ಸುಹೇಲ್‌ದೇವ್ ಸಮಾಜ್ ಪಾರ್ಟಿ 6 ಸ್ಥಾನಗಳಲ್ಲಿ ವಿಜಯ ಸಾಧಿಸಿದೆ.

ನಮ್ಮ ಸ್ಥಾನಗಳನ್ನು ಎರಡೂವರೆ ಪಟ್ಟು ಮತ್ತು ಮತಗಳಿಕೆಯ ಪ್ರಮಾಣವನ್ನು ಒಂದೂವರೆ ಪಟ್ಟು ಹೆಚ್ಚಿಸಿದ್ದಕ್ಕಾಗಿ ಉತ್ತರ ಪ್ರದೇಶದ ಜನರಿಗೆ ಧನ್ಯವಾದಗಳು. ಈ ಮೂಲಕ ಬಿಜೆಪಿಯ ಸ್ಥಾನಗಳನ್ನು ಕಡಿಮೆ ಮಾಡಬಹುದು ಎಂಬುದನ್ನು ನಾವು ತೋರಿಸಿದ್ದೇವೆ. ಇದು ಮುಂದುವರಿಯುತ್ತದೆ. ಅರ್ಧಕ್ಕೂ ಅಧಿಕ ಗೊಂದಲ ಮತ್ತು ಭ್ರಮೆಗಳು ಈಗ ಕಡಿಮೆಯಾಗಿವೆ; ಇನ್ನುಳಿದವು ಮುಂದಿನ ದಿನಗಳಲ್ಲಿ ಕಡಿಮೆಯಾಗುತ್ತವೆ. ಜನರ ಹಿತಾಸಕ್ತಿಗಾಗಿ ನಡೆಯುವ ಹೋರಾಟ ಗೆಲ್ಲುತ್ತದೆ' ಎಂದಿದ್ದಾರೆ.

ADVERTISEMENT

403 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಿರುವ ಉತ್ತರ ಪ್ರದೇಶದ 347 ಕಡೆಗಳಲ್ಲಿ ಎಸ್‌ಪಿ, ಆರ್‌ಎಲ್‌ಡಿ 33 ಮತ್ತು ಎಸ್‌ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.