ADVERTISEMENT

ಉ.ಪ್ರ: ಬಾಂಗ್ಲಾದೇಶದ ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಸರ್ಕಾರದಿಂದ ಪುನರ್ವಸತಿ

ಪಿಟಿಐ
Published 29 ಜನವರಿ 2026, 10:36 IST
Last Updated 29 ಜನವರಿ 2026, 10:36 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಲಖನೌ: ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ಸ್ಥಳಾಂತರಗೊಂಡು ರಾಜ್ಯದ ಮೇರಠ್ ಜಿಲ್ಲೆಯ ಮವಾನಾ ಎಂಬಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ 99 ಹಿಂದೂ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿರ್ಧಾರವನ್ನು ಉತ್ತರ ಪ್ರದೇಶ ಸಚಿವ ಸಂಪುಟ ತೆಗೆದುಕೊಂಡಿದೆ ಎಂದು ಸಚಿವ ಸುರೇಶ್ ಕುಮಾರ್ ಖನ್ನಾ ತಿಳಿಸಿದ್ದಾರೆ.

ADVERTISEMENT

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಹಣಕಾಸು, ಸಂದೀಯ ಹಾಗೂ ಕುಟುಂಬ ಸಚಿವ ಖನ್ನಾ, ‘ಸದ್ಯ ಅವರು ನಂಗ್ಲಾ ಗೋಸಾಯಿ ‍ಪ್ರದೇಶದಲ್ಲಿ ವಾಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಹಸಿರು ಪೀಠದ ನಿಯಮದಂತೆ ಅವರಿಗೆ ಪುನರ್ವಸತಿ ಕಲ್ಪಿಸುತ್ತೇವೆ’ ಎಂದು ಹೇಳಿದ್ದಾರೆ.

ಪುನರ್ವಸತಿ ಯೋಜನೆಯಡಿ, 50 ಕುಟುಂಬಗಳನ್ನು ಕಾನ್ಪುರ ದೆಹಟ್ ಜಿಲ್ಲೆಯ ಭೈನ್‌ಸಾಯ ಜಿಲ್ಲೆಯಲ್ಲಿರುವ ಪುನರ್ವಸತಿ ಇಲಾಖೆಯ 27.51 ಎಕರೆ ಪ್ರದೇಶಲ್ಲಿ ಅವರಿಗೆ ಅವರಿಗೆ ಸೂರು ಕಲ್ಪಿಸಲಿದೆ. ಉಳಿದ 49 ಕುಟುಂಬಗಳಿಗೆ ತಾಜ್‌ಪುರ ತರ್ಸೌಲಿ ಗ್ರಾಮದ 26.01 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.

ಪ್ರತಿ ಕುಟುಂಬಕ್ಕೆ 0.5 ಎಕರೆ ಭೂಮಿಯನ್ನು 30 ವರ್ಷದ ಮಟ್ಟಿಗೆ ಲೀಸ್‌ ನೀಡಲಾಗುವುದು. ಎರಡು ಬಾರಿ ಲೀಸ್ ನವೀಕರಣ ಮಾಡುವ ಅವಕಾಶ ನೀಡಲಾಗುತ್ತದೆ. 90 ವರ್ಷದ ಬಳಿಕ ನಿಗದಿತ ಪ್ರೀಮಿಯಂ ಅಥವಾ ಗುತ್ತಿಗೆ ಬಾಡಿಗೆಯನ್ನು ಪಾವತಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.