
ಪ್ರಜಾವಾಣಿ ವಾರ್ತೆ
ವಾರಾಣಸಿ (ಪಿಟಿಐ): ಬಾಬರಿ ಮಸೀದಿ ಧ್ವಂಸಗೊಳಿಸಿ 33 ವರ್ಷಗಳಾಗಿದ್ದು, ವಾರಾಣಸಿಯಾದ್ಯಂತ ಪೊಲೀಸರು ಶನಿವಾರ ಬಿಗಿ ಭದ್ರತೆ ವಹಿಸಿದ್ದರು.
ದಶಾಶ್ವಮೇಧ್ ಎಸಿಪಿ ಅತುಲ್ ಅಂಜನ್ ತ್ರಿಪಾಠಿ ಅವರು, ‘ಶನಿವಾರ ವಿಶೇಷ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ಪೊಲೀಸರು ಹಲವು ಪ್ರದೇಶಗಳಲ್ಲಿ ಗಸ್ತು ತಿರುಗಿದರು. ಜನದಟ್ಟಣೆಯ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು’ ಎಂದು ತಿಳಿಸಿದರು.
‘ಕೆಲವು ಕಡೆಗಳಲ್ಲಿ ವಾಹನಗಳ ತಪಾಸಣೆ ನಡೆಸಲಾಯಿತು. ಪೊಲೀಸರು ಸಾಮಾನ್ಯ ಜನರಂತೆ ಇದ್ದು ಪರಿಶೀಲನೆ ನಡೆಸಿದರು. ಭದ್ರತಾ ಪಡೆಗಳು ಸೂಕ್ಷ್ಮ ಪ್ರದೇಶಗಳಲ್ಲಿ ಮನೆಗಳ ಚಾವಣಿಗಳಲ್ಲಿ ನಿಂತು ಕಣ್ಗಾವಲು ವಹಿಸಿದ್ದರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.