ADVERTISEMENT

ಭಗವಂತ ರಾಮ ಕರೆದಾಗ ಅಯೋಧ್ಯೆಗೆ ಭೇಟಿ ಎಂದ ಅಖಿಲೇಶ್: ಸ್ಪೀಕರ್ ಆಹ್ವಾನ ನಿರಾಕರಣೆ

ಪಿಟಿಐ
Published 11 ಫೆಬ್ರುವರಿ 2024, 3:04 IST
Last Updated 11 ಫೆಬ್ರುವರಿ 2024, 3:04 IST
ಅಖಿಲೇಶ್ ಯಾದವ್‌
ಅಖಿಲೇಶ್ ಯಾದವ್‌   

ಲಖನೌ: ಸಮಾಜವಾದಿ ಪಕ್ಷದ ನಾಯಕ ಅಖಿಲೆಶ್ ಯಾದವ್ ಅವರು ಆಹ್ವಾನ ನಿರಾಕರಣೆ ನಡುವೆಯೂ ಉತ್ತರ ಪ್ರದೇಶದ ವಿಧಾನಮಂಡಲದ ಉಭಯ ಸದನಗಳ ಹಲವು ಸದಸ್ಯರು ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.

ಬಜೆಟ್ ಅಧಿವೇಶನದ ಚರ್ಚೆ ವೇಳೆ ವಿಧಾನಸಭೆ ಸ್ಪೀಕರ್ ಅವರು, ನಾಳೆ ಎಲ್ಲ ಶಾಸಕರು ಅಯೋಧ್ಯೆಗೆ ಹೋಗುತ್ತಿದ್ದೇವೆ. ನೀವೂ ನಮ್ಮ ಜೊತೆ ಅಯೋಧ್ಯೆಗೆ ಬನ್ನಿ ಎಂದು ಅಖಿಲೇಶ್‌ಗೆ ಶನಿವಾರ ಆಹ್ವಾನ ನೀಡಿದರು. ಇದನ್ನು ತಿರಸ್ಕರಿಸಿದ ವಿಪಕ್ಷ ನಾಯಕ ಅಖಿಲೇಶ್, ಭಗವಂತ ಶ್ರೀರಾಮ ನಮ್ಮನ್ನು ಕರೆದಾಗ ಮಾತ್ರ ಹೋಗುತ್ತೇವೆ ಎಂದಿದ್ದಾರೆ.

ಅಖಿಲೇಶ್ ಹೊರತುಪಡಿಸಿ ಬಹುತೇಕ ನಾಯಕರು ಇಂದು ಅಯೋಧ್ಯೆಗೆ ಭೇಟಿ ನೀಡಲು ಒಪ್ಪಿಗೆ ಸೂಚಿಸಿದ್ದಾರೆ.

ADVERTISEMENT

ಹೊಸದಾಗಿ ನಿರ್ಮಾಣಗೊಂಡಿರುವ ಅಯೋಧ್ಯೆಯ ರಾಮ ಮಂದಿರಕ್ಕೆ ಬಂದು ಪ್ರಾರ್ಥನೆ ಸಲ್ಲಿಸುವಂತೆ ಸಿಎಂ ಯೋಗಿ ಆದಿತ್ಯನಾಥ್, ಸ್ಪೀಕರ್ ಸತೀಶ್ ಮಹಾನಾ ಅವರು ಉಭಯ ಸದನಗಳ ಶಾಸಕರಿಗೂ ಆಹ್ವಾನ ನೀಡಿದ್ದರು.

ಭಾನುವಾರ ಎಲ್ಲ ಶಾಸಕರು ಅಯೋಧ್ಯೆಗೆ ತೆರಳಲಿದ್ದಾರೆ ಎಂದು ಸ್ಪೀಕರ್ ಮಹಾನಾ ತಿಳಿಸಿದ್ದಾರೆ.

ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ಒಟ್ಟು 400 ಮತ್ತು ವಿಧಾನಸಭೆಯಲ್ಲಿ 100 ಸದಸ್ಯರಿದ್ದಾರೆ. ಇದರಲ್ಲಿ ಎಷ್ಟು ಮಂದಿ ಭೇಟಿ ನೀಡಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.