ADVERTISEMENT

ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡವರಿಗೆ ಸಾಮೂಹಿಕ ವಿವಾಹ: ಅನುಮತಿ ನಿರಾಕರಣೆ

ಪಿಟಿಐ
Published 17 ಜುಲೈ 2024, 14:48 IST
Last Updated 17 ಜುಲೈ 2024, 14:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬರೇಲಿ (ಉತ್ತರ ಪ್ರದೇಶ): ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಸಿದ್ಧರಿರುವ ಪುರುಷ–ಮಹಿಳೆಯರಿಗೆ ಸಾಮೂಹಿಕ ವಿವಾಹ ನಡೆಸಲು ಇತ್ತೆಹಾದ್–ಎ–ಮಿಲ್ಲತ್ ಕೌನ್ಸಿಲ್ (ಐಎಂಸಿ) ಎಂಬ ಸ್ಥಳೀಯ ರಾಜಕೀಯ ಸಂಘಟನೆಯು ಮುಂದಾಗಿದ್ದು, ಅದಕ್ಕೆ ಸ್ಥಳೀಯ ಆಡಳಿತ ಅನುಮತಿ ನಿರಾಕರಿಸಿದೆ. 

ಐಎಂಸಿ ಮುಖ್ಯಸ್ಥ ತೌಕೀರ್ ರಜಾ ಖಾನ್ ಎಂಬುವವರು ಈ ರೀತಿ ಸಾಮೂಹಿಕ ವಿವಾಹ ನಡೆಸುವುದಾಗಿ ಪ್ರಕಟಿಸಿ, ಮತಾಂತರಗೊಂಡ ಪುರುಷ–ಮಹಿಳೆಯರನ್ನು ಆಹ್ವಾನಿಸಿದ್ದರು. 

‘ನಾವು ಕಾನೂನುಬದ್ಧವಾಗಿಯೇ ಕೆಲಸ ಮಾಡುತ್ತಿದ್ದೇವೆ. ಸಾಮೂಹಿಕ ವಿವಾಹವನ್ನು ಸ್ಥಳೀಯ ಆಡಳಿತದ ಅನುಮತಿ ಪಡೆದ ನಂತರವೇ ನಡೆಸುತ್ತೇವೆ. ಈಗ ಅನುಮತಿ ನಿರಾಕರಿಸಲಾಗಿದೆ’ ಎಂದು ಬುಧವಾರ ತೌಕೀರ್ ಪ್ರತಿಕ್ರಿಯಿಸಿದರು. 

ADVERTISEMENT

ಸಾಮೂಹಿಕ ವಿವಾಹಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅನುಮತಿ ನೀಡಲಿಲ್ಲ ಎಂದು ಐಎಂಸಿ ರಾಜ್ಯ ಉಸ್ತುವಾರಿ ನದೀಮ್ ಖುರೇಶಿ ತಿಳಿಸಿದರು. 

ಜುಲೈ 21ರಂದು ಬೆಳಿಗ್ಗೆ 11 ಗಂಟೆಗೆ ಖಲೀಲ್ ಪ್ರೌಢಶಾಲೆಯ ಆವರಣದಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ಪುರುಷ–ಮಹಿಳೆಯರಿಗೆ ಸಾಮೂಹಿಕ ವಿವಾಹ ಆಯೋಜಿಸಿರುವುದಾಗಿ ಐಎಂಸಿ ಪ್ರಕಟಿಸಿತ್ತು. ಜಿಲ್ಲಾ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಮಂಗಳವಾರ ಸಂಜೆ ಅನುಮತಿ ನಿರಾಕರಿಸಿರುವುದಾಗಿ ಹೇಳಿದರು. 

ಸಾಮೂಹಿಕ ವಿವಾಹವನ್ನು ಮುಂದೂಡಲಾಗಿದ್ದು, ಅನುಮತಿ ಸಿಕ್ಕ ನಂತರ ಆಯೋಜಿಸುವುದಾಗಿ ಐಎಂಸಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.