ADVERTISEMENT

ಪಸ್ಮಾಂದಾ ಮುಸ್ಲಿಮರಿಗೆ ರಾಜಕೀಯ ಪ್ರಾತಿನಿಧ್ಯ: ಲೋಕಸಭೆ ಮೇಲೆ ಬಿಜೆಪಿ ಕಣ್ಣು

ಪಿಟಿಐ
Published 23 ಅಕ್ಟೋಬರ್ 2022, 13:45 IST
Last Updated 23 ಅಕ್ಟೋಬರ್ 2022, 13:45 IST
   

ಲಖನೌ: ಉತ್ತರಪ್ರದೇಶದಲ್ಲಿ ಎಲ್ಲ 80 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಕಣ್ಣಿಟ್ಟಿರುವ ಬಿಜೆಪಿ, ಹಿಂದುಳಿದ ಪಸ್ಮಾಂದಾ ಮುಸ್ಲಿಂ ಸಮುದಾಯದವರ ಮೇಲೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ರಾಜಕೀಯ ಪ್ರಾತಿನಿಧ್ಯದ ಭರವಸೆಯನ್ನು ಪಕ್ಷ ಕೊಟ್ಟಿದೆ.

ಮುಕ್ತ ಪಡಿತರ ಮತ್ತು ವಸತಿ ಮುಂತಾದ ಸರ್ಕಾರಿ ಸೌಲಭ್ಯಗಳು ಈ ಸಮುದಾಯಕ್ಕೂ ಲಭಿಸುತ್ತಿರುವುದನ್ನು ಪ್ರಸ್ತಾಪಿಸಿ, ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಅನುಕೂಲವಾಗುವ ರೀತಿಹಿಂದುಳಿದ ಪಸ್ಮಾಂದಾ ಮುಸ್ಲಿಮರ ರಾಜ್ಯಮಟ್ಟದ ಸಭೆಯನ್ನು ನಡೆಸಿದೆ. ಇಂತಹುದೇ ಸಭೆಗಳನ್ನು ಎಲ್ಲ ಸ್ಥಳೀಯಾಡಳಿತಗಳ ವ್ಯಾಪ್ತಿಯಲ್ಲೂ ನಡೆಸಲು ನಿರ್ಧರಿಸಿದೆ.

ಪಸ್ಮಾಂದಾ ಸಮುದಾಯದಲ್ಲಿಅನ್ಸಾರಿ, ಖುರೇಶಿ, ಮನ್ಸೂರಿ, ಸಲ್ಮಾನ್‌ ಮತ್ತು ಸಿದ್ದಿಖಿ ಸೇರಿ 41 ಜಾತಿಗಳು ಇವೆ. ನೇಕಾರಿಕೆ ಮತ್ತು ಕಸಾಯಿಖಾನೆಗಳನ್ನು ನಡೆಸುವಂತಹ ವೃತ್ತಿಯಲ್ಲಿ ಹೆಚ್ಚು ತೊಡಗಿಸಿಕೊಂಡಿದ್ದಾರೆ.ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿಯೂ ಹೆಚ್ಚು ಹಿಂದುಳಿದ ಸಮುದಾಯವೆಂದು ಇವರನ್ನು ಪರಿಗಣಿಸಲಾಗಿದೆ. ಇವರಸಾಮಾಜಿಕ, ಆರ್ಥಿಕ ಸಬಲೀಕರಣದ ಜತೆಗೆ ರಾಜಕೀಯ ಪ್ರಾತಿನಿಧ್ಯಕ್ಕೂ ಆದ್ಯತೆ ನೀಡಲಾಗುತ್ತಿದೆ ಎಂದು ಪಕ್ಷ ಹೇಳಿಕೊಂಡಿದೆ.

ADVERTISEMENT

ಪಸ್ಮಾಂದಾ ಮುಸ್ಲಿಮರ ಸಭೆಯಲ್ಲಿ ಬಿಜೆಪಿ ನಾಯಕರು, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಹಾಗೂ ಕಾಂಗ್ರೆಸ್‌ ಯಾವಾಗಲೂ ಮುಸ್ಲಿಮರನ್ನು ‘ಮತ ಬ್ಯಾಂಕ್‌’ ಆಗಿ ಬಳಸಿಕೊಂಡಿವೆ. ಆದರೆ, ಈ ಸಮುದಾಯಕ್ಕೆ ನಿಜವಾಗಿಯೂ ಸಿಗಬೇಕಾದದ್ದನ್ನು ಕೊಟ್ಟಿಲ್ಲವೆಂದು ಎತ್ತಿತೋರಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈವರೆಗೆ ಮುಸ್ಲಿಮರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ ಕೆಲಸ ಮಾಡಿವೆ. ಬಿಜೆಪಿ ಈಗ ಮುಸ್ಲಿಮರ ರಾಜಕೀಯ ಸಬಲೀಕರಣ ಮತ್ತು ಅವರ ಭಾಗವಹಿಸುವಿಕೆಯ ಖಾತ್ರಿಯನ್ನು ಬಯಸಿದೆ ಎಂದು ಪಸ್ಮಾಂದಾ ಸಮುದಾಯಕ್ಕೆ ಸೇರಿದಉತ್ತರ ಪ್ರದೇಶದ ಸಚಿವ ಡ್ಯಾನಿಶ್‌ ಅಜಾದ್‌ ಅನ್ಸಾರಿ ಹೇಳಿದರು.

ಈ ಬಾರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಪ್ರಬಲಮತ್ತುನಿಷ್ಠಾವಂತ ಮುಸ್ಲಿಂ ಕಾರ್ಯಕರ್ತರಿಗೆಟಿಕೆಟ್ ನೀಡಲಾಗುವುದು ಎಂದುಉತ್ತರ ಪ್ರದೇಶದ ಬಿಜೆಪಿಯ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಕನ್ವರ್‌ ಬಾಸಿತ್ ಅಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.