ADVERTISEMENT

ದಕ್ಷಿಣ ಆಫ್ರಿಕಾ: ಕೋವಿಡ್‌–19ರ ಹೊಸ ರೂಪಾಂತರ ಪತ್ತೆ

ರಾಯಿಟರ್ಸ್
Published 26 ನವೆಂಬರ್ 2021, 9:12 IST
Last Updated 26 ನವೆಂಬರ್ 2021, 9:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೋಹಾನ್ಸ್‌ಬರ್ಗ್: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳು ಕೋವಿಡ್–19 ಹೊಸ ರೂಪಾಂತವನ್ನು ಪತ್ತೆ ಹಚ್ಚಿದ್ದು, ಅದರಿಂದ ಆಗಬಹುದಾದ ಸಂಭಾವ್ಯ ಪರಿಣಾಮಗಳ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಹೊಸ ರೂಪಾಂತರವನ್ನು ಬಿ.1.1.529 ಎಂದು ಕರೆಯಲಾಗಿದೆ. ಇದು ಅಸಾಮಾನ್ಯ ರೂಪಾಂತರವಾಗಿದ್ದು, ದೇಹದ ಪ್ರತಿಕಾಯಗಳಿಂದ ತಪ್ಪಿಸಿಕೊಂಡು, ಹೆಚ್ಚಾಗಿ ವ್ಯಾಪಿಸುವ ಸಾಮರ್ಥ್ಯ ಹೊಂದಿವೆ ಎಂದು ವಿಜ್ಞಾನಿಗಳು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ದೇಶದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಗೌಟೆಂಗ್‌ ಪ್ರಾಂತ್ಯದಲ್ಲಿ ಈ ರೂಪಾಂತರ ವೇಗವಾಗಿ ಹರಡುತ್ತಿದೆ. ಅಲ್ಲದೆ ದೇಶದ ಇತರ ಎಂಟು ಪ್ರಾಂತ್ಯಗಳಲ್ಲಿ ಈಗಾಗಲೇ ಇದು ವ್ಯಾಪಿಸಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ADVERTISEMENT

ದಕ್ಷಿಣ ಆಫ್ರಿಕಾದ ಸುಮಾರು 100 ಮಾದರಿಗಳಲ್ಲಿ ಬಿ.1.1.529 ದೃಢಪಟ್ಟಿದೆ. ಇದು ಬೋಟ್ಸ್‌ವಾನಾ ಮತ್ತು ಹಾಂಗ್‌ಕಾಂಗ್‌ನಲ್ಲೂ ಕಂಡು ಬಂದಿದೆ. ದಕ್ಷಿಣ ಆಫ್ರಿಕಾದಿಂದ ಹಾಂಗ್‌ಕಾಂಗ್‌ಗೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಈ ರೂಪಾಂತರ ಪತ್ತೆಯಾಗಿದೆ.

ಗೌಟೆಂಗ್‌ನಲ್ಲಿ ದೃಢಪಡುತ್ತಿರುವ ಪ್ರಕರಣಗಳಲ್ಲಿ ಶೇ 90ರಷ್ಟು ಈ ಹೊಸ ರೂಪಾಂತರದ್ದಾಗಿದೆ ಎಂದು ವಿಜ್ಞಾನಿಗಳು ನಂಬಿರುವುದಾಗಿ ದಕ್ಷಿಣ ಆಫ್ರಿಕಾದ ‘ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ಕಮ್ಯುನಿಕೆಬಲ್‌ ಡಿಸೀಸಸ್‌’ ತಿಳಿಸಿದೆ.

ಹೊಸ ರೂಪಾಂತರದ ವಿಕಸನ ಕುರಿತು ಚರ್ಚಿಸಲು ವಿಶ್ವ ಆರೋಗ್ಯ ಸಂಸ್ಥೆಯು ತಜ್ಞರ ತುರ್ತು ಸಭೆ ಕರೆಯುವಂತೆ ದಕ್ಷಿಣ ಆಫ್ರಿಕಾ ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.