ADVERTISEMENT

ಭಾರತೀಯ ವಿದ್ಯಾರ್ಥಿಗೆ ಕೋಳ: ಅಕ್ರಮ ವಲಸೆ ಸಹಿಸುವುದಿಲ್ಲ ಎಂದ ಅಮೆರಿಕ

ಪಿಟಿಐ
Published 10 ಜೂನ್ 2025, 16:27 IST
Last Updated 10 ಜೂನ್ 2025, 16:27 IST
   

ನವದೆಹಲಿ: ಅಮೆರಿಕವು ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಆದರೆ, ಅಕ್ರಮ ಪ್ರವೇಶ ಮತ್ತು ವೀಸಾಗಳ ದುರುಪಯೋಗವನ್ನು ಸಹಿಸಲು ಸಾಧ್ಯವಿಲ್ಲ ಎಂದು ಇಲ್ಲಿನ ಅಮೆರಿಕ ರಾಯಭಾರ ಕಚೇರಿ ಮಂಗಳವಾರ ತಿಳಿಸಿದೆ.

ರಾಯಭಾರ ಕಚೇರಿಯು ಎಕ್ಸ್ ಪೋಸ್ಟ್ ಮೂಲಕ ಈ ಬಗ್ಗೆ ಸಂಕ್ಷಿಪ್ತ ಹೇಳಿಕೆ ಹಂಚಿಕೊಂಡಿದೆ.

‘ಅಮೆರಿಕವು ದೇಶಕ್ಕೆ ಕಾನೂನುಬದ್ಧ ಪ್ರಯಾಣಿಕರನ್ನು ಸ್ವಾಗತಿಸುತ್ತಲೇ ಇದೆ. ಅಕ್ರಮ ಪ್ರವೇಶ, ವೀಸಾಗಳ ದುರುಪಯೋಗ ಅಥವಾ ಅಮೆರಿಕ ಕಾನೂನಿನ ಉಲ್ಲಂಘನೆಯನ್ನು ನಾವು ಸಹಿಸಲು ಸಾಧ್ಯವಿಲ್ಲ. ಅಂತಹರಿಗೆ ಅಮೆರಿಕ ಪ್ರವೇಶಿಸುವ ಯಾವುದೇ ಹಕ್ಕು ಇರುವುದಿಲ್ಲ’ ಎಂದು ಅದು ಹೇಳಿದೆ.

ADVERTISEMENT

ಅಮೆರಿಕದ ನ್ಯೂವಾರ್ಕ್ ಲಿಬರ್ಟಿ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿದ್ಯಾರ್ಥಿಯನ್ನು ಕೈಕೋಳ ಹಾಕಿ ನೆಲದ ಮೇಲೆ ಉರುಳಿಸಿರುವ ವಿಡಿಯೊ ಮತ್ತು ಚಿತ್ರಗಳು ಹರಿದಾಡುತ್ತಿದೆ. ಈ ಕುರಿತಂತೆ ಭಾರತೀಯರು ಆಕ್ಷೇಪ ವ್ಯಕ್ತಪಡಿದುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ರಾಯಭಾರ ಕಚೇರಿ ಈ ಸ್ಪಷ್ಟನೆ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.