ADVERTISEMENT

ಚೀನಾ ಹಸ್ತಕ್ಷೇಪ ನಿರ್ಬಂಧಕ್ಕೆ ಮಸೂದೆ

ಚೀನಾದ ವಿರುದ್ಧ ಮಸೂದೆ ಅಂಗೀಕರಿಸಿದ ಅಮೆರಿಕ

ಪಿಟಿಐ
Published 29 ಜನವರಿ 2020, 20:05 IST
Last Updated 29 ಜನವರಿ 2020, 20:05 IST
   

ವಾಷಿಂಗ್ಟನ್: ಟಿಬೆಟ್‌ನ ಅಧ್ಯಾತ್ಮ ಗುರು ದಲೈಲಾಮಾ ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುವ ಚೀನಾದ ಅಧಿಕಾರಿಗಳಿಗೆ ಆರ್ಥಿಕ ಮತ್ತು ಪ್ರಯಾಣ ನಿರ್ಬಂಧಗೊಳಿಸುವ ಮಸೂದೆಗೆ ಅಮೆರಿಕ ಸಂಸತ್‌ನ ಕೆಳಮನೆ ಅಂಗೀಕಾರ ನೀಡಿದೆ.

ಹೌಸ್ ರೂಲ್ಸ್ ಕಮಿಟಿಯ ಅಧ್ಯಕ್ಷ ಮತ್ತು ಚೀನಾದ ಕಾರ್ಯನಿರ್ವಾಹಕ ಆಯೋಗದ ಅಧ್ಯಕ್ಷ ಜೇಮ್ಸ್ ಪಿ. ಮೆಕ್‌ಗವರ್ನ್ ಮಂಗಳವಾರ ಮಸೂದೆ ಮಂಡಿಸಿದರು.

ಟಿಬೆಟನ್‌ ಬೌದ್ಧ ನಾಯಕರ ಉತ್ತರಾಧಿಕಾರಿಯನ್ನು ಟೆಬೆಟನ್‌ ಬೌದ್ಧ ಸಮುದಾಯ ಮಾತ್ರ ನಿರ್ಧರಿಸಬೇಕು. ಇದರಲ್ಲಿ ಚೀನಾದ ಅಧಿಕಾರಿಗಳ ಹಸ್ತಕ್ಷೇಪ ಕಂಡುಬಂದರೆ ಅಂಥವರ ಅಮೆರಿಕ ಪ್ರಯಾಣ ನಿಷೇಧಿಸಲಾಗು
ವುದು ಎಂದು ಮಸೂದೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.