ADVERTISEMENT

ಹೊಸ ಕಸ್ಟಮ್‌ ನಿಯಮ: ಅಮೆರಿಕ – ಭಾರತ ಅಂಚೆ ವ್ಯವಹಾರ ಸ್ಥಗಿತ

ಪಿಟಿಐ
Published 31 ಆಗಸ್ಟ್ 2025, 14:33 IST
Last Updated 31 ಆಗಸ್ಟ್ 2025, 14:33 IST
...
...   

ನವದೆಹಲಿ: ಅಮೆರಿಕವು ಜಾರಿಗೊಳಿಸಿರುವ ಹೊಸ ನಿಯಮಗಳು ಅಸ್ಪಷ್ಟವಾಗಿರುವ ಕಾರಣಕ್ಕೆ ಅದರ ಜೊತೆಗಿನ ಎಲ್ಲ ರೀತಿಯ ಅಂಚೆ ವ್ಯವಹಾರಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಭಾರತೀಯ ಅಂಚೆ ಇಲಾಖೆ ಸ್ಥಗಿತಗೊಳಿಸಿದೆ.

ಅಮೆರಿಕ ಸರ್ಕಾರವು ಹೊಸ ಕಸ್ಟಮ್‌ ನಿಯಮಗಳನ್ನು ಜಾರಿಗೊಳಿಸಿರುವ ಕಾರಣ ಭಾರತೀಯ ಅಂಚೆ ಇಲಾಖೆಯು ₹8,800ಗಳಿಗಿಂತ ಅಧಿಕ ಮೌಲ್ಯದ ವಸ್ತುಗಳ ರವಾನೆಯನ್ನು ಈ ಹಿಂದೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

ಈ ನಿರ್ಧಾರವನ್ನು ಪುನರ್‌ಪರಿಶೀಲಿಸಿರುವ ಅಂಚೆ ಇಲಾಖೆ ಪತ್ರ, ದಾಖಲೆ ಮತ್ತು ₹8,800 ಮೌಲ್ಯದವರೆಗಿನ ವಸ್ತುಗಳು ಸೇರಿದಂತೆ ಎಲ್ಲ ರೀತಿಯ ಅಂಚೆ ವ್ಯವಹಾರಗಳ ಮುಂಗಡ ಕಾಯ್ದಿರಿಸುವಿಕೆಯನ್ನು ಸ್ಥಗಿತಗೊಳಿಸಿದೆ.

ADVERTISEMENT

‘ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಶೀಘ್ರದಲ್ಲಿ ಎಲ್ಲ ಸೇವೆಗಳನ್ನು ಪುನರಾರಂಭಿಸಲು ಪ್ರಯತ್ನಿಸಲಾಗುತ್ತದೆ’ ಎಂದು ಅಂಚೆ ಇಲಾಖೆ ಹೇಳಿದೆ.

ಅಮೆರಿಕವು ಜುಲೈ 30ರಂತೆ ಹೊರಡಿಸಿರುವ ಆದೇಶದ ಅನ್ವಯ ₹8,800ಗಿಂತ ಅಧಿಕ ಮೌಲ್ಯದ ವಸ್ತುಗಳಿಗೆ ಆಗಸ್ಟ್ 20ರಿಂದ ಸುಂಕ ವಿಧಿಸಲಾಗುತ್ತದೆ. ಆದರೆ, ಈ ಕುರಿತಾದ ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇರದ ಕಾರಣ ಗೊಂದಲ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.