ADVERTISEMENT

ಅಮೆರಿಕ - ಭಾರತ ವ್ಯಾಪಾರ ಒಪ್ಪಂದ; ಸುಂಕ ಶೇ 15-16 ರಷ್ಟು‌ ಇಳಿಕೆ ಸಾಧ್ಯತೆ: ವರದಿ

ಏಜೆನ್ಸೀಸ್
Published 22 ಅಕ್ಟೋಬರ್ 2025, 6:16 IST
Last Updated 22 ಅಕ್ಟೋಬರ್ 2025, 6:16 IST
<div class="paragraphs"><p>ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ </p></div>

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

   

ಕೃಪೆ: ಪಿಟಿಐ

ನವದೆಹಲಿ: ಭಾರತ ಹಾಗೂ ಅಮೆರಿಕ ನಡುವಣ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಏರ್ಪಡುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಇದು ಸಾಧ್ಯವಾದರೆ, ಭಾರತದಿಂದ ಆಮದಾಗುವ ಸರುಕಗಳ ಮೇಲೆ ಅಮೆರಿಕ ವಿಧಿಸುತ್ತಿರುವ ಸುಂಕ ಶೇ 15-16 ರಷ್ಟು ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ADVERTISEMENT

ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದರಿಂದ ಹಿಂದೆ ಸರಿಯಲಿದೆ ಎಂಬುದಕ್ಕೂ ಈ ಒಪ್ಪಂದ ಸಂಕೇತವಾಗಲಿದೆ ಎಂದೂ ಉಲ್ಲೇಖಿಸಲಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ ಮಂಗಳವಾರ ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ವ್ಯಾಪಾರಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ ಎಂದಿದ್ದಾರೆ.

ಇಂಧನದ ವಿಚಾರವನ್ನೂ ಚರ್ಚಿಸಲಾಗಿದೆ. ರಷ್ಯಾದಿಂದ ತೈಲ ಖರೀದಿಸುವುದನ್ನು ಮಿತಿಗೊಳಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ ಎಂದೂ ತಿಳಿಸಿದ್ದಾರೆ.

ಉಭಯ ನಾಯಕರು ಮಾತುಕತೆ ನಡೆಸಿರುವುದನ್ನು ಮೋದಿ ಅವರೂ ಖಚಿತಪಡಿಸಿದ್ದಾರೆ. ಆದರೆ, ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ.

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಮೋದಿ, 'ಕರೆ ಮಾಡಿ, ದೀಪಾವಳಿ ಶುಭಾಶಯ ತಿಳಿಸಿದ ಅಧ್ಯಕ್ಷ ಟ್ರಂಪ್‌ ಅವರಿಗೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.

ಹಾಗೆಯೇ, ʼನಮ್ಮ ಎರಡು ಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರಗಳು ಜಗತ್ತನ್ನು ಭರವಸೆಯ ಬೆಳಕಿನಿಂದ ಬೆಳಗುವುದನ್ನು ಮುಂದುವರಿಸಲಿ. ಎಲ್ಲ ರೀತಿಯ ಭಯೋತ್ಪಾದನೆ ವಿರುದ್ಧ ನಿಲ್ಲಲಿ ಎಂದು ಬೆಳಕಿನ ಹಬ್ಬದಂದು ಆಶಿಸುತ್ತೇನೆʼ ಎಂದೂ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.