ADVERTISEMENT

ಕೋವಿಡ್: ಭಾರತಕ್ಕೆ ನೆರವು, ಕನ್ನಡದಲ್ಲಿ ಅಮೆರಿಕ ಕಾನ್ಸುಲೇಟ್‌ ಕಚೇರಿ ಟ್ವೀಟ್‌

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2021, 2:53 IST
Last Updated 26 ಏಪ್ರಿಲ್ 2021, 2:53 IST
ಲಸಿಕೆಯ ಸಿರಿಂಜ್‌ನ ತುದಿಯ ಹನಿಯಲ್ಲಿ 'ಕೋವಿಡ್–19' ಪದವು ಪ್ರತಿಫಲನಗೊಂಡಿರುವುದು–ಪ್ರಾತಿನಿಧಿಕ ಚಿತ್ರ
ಲಸಿಕೆಯ ಸಿರಿಂಜ್‌ನ ತುದಿಯ ಹನಿಯಲ್ಲಿ 'ಕೋವಿಡ್–19' ಪದವು ಪ್ರತಿಫಲನಗೊಂಡಿರುವುದು–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನಲ್ಲಿರುವ ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ಅಮೆರಿಕ ಸರ್ಕಾರ ಪ್ರಕಟಿಸಿದೆ. ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್‌ ಕಚೇರಿಯು ಕನ್ನಡದಲ್ಲಿಯೂ ಸಂದೇಶಗಳನ್ನು ಪ್ರಕಟಿಸಿದೆ.

ಭಾರತದಲ್ಲಿ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಎಲ್ಲ ರೀತಿಯ ನೆರವು ನೀಡುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.

ಅಮೆರಿಕದ ಭದ್ರತಾ ಸಲಹೆಗಾರ ಜೇಕ್‌ ಸಲ್ಲಿವಾನ್‌, 'ಭಾರತದಲ್ಲಿ ಕೋವಿಡ್‌ ಸಾಂಕ್ರಾಮಿಕ ತೀವ್ರವಾಗಿರುವ ಬಗ್ಗೆ ಅಮೆರಿಕ ಕಳಕಳಿ ಹೊಂದಿದೆ. ಸಾಂಕ್ರಾಮಿಕದ ವಿರುದ್ಧ ಹೋರಾಡುವಾಗ ಭಾರತದ ನಮ್ಮ ಸ್ನೇಹಿತರು ಮತ್ತು ಸಹಭಾಗಿಗಳಿಗೆ ಹೆಚ್ಚಿನ ಸಾಮಗ್ರಿಗಳು ಮತ್ತು ಅಗತ್ಯ ಬೆಂಬಲ ನೀಡಲು ಶ್ರಮಿಸುತ್ತಿದ್ದೇವೆ' ಎಂದು ಟ್ವೀಟಿಸಿದ್ದಾರೆ. ಅಮೆರಿಕ ಕಾನ್ಸುಲೇಟ್‌ ಕಚೇರಿಯು ಇದನ್ನು ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಪ್ರಕಟಿಸಿದೆ.

ADVERTISEMENT

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್‌ ಸಹ ಭಾರತದ ಕೋವಿಡ್‌ ಸ್ಥಿತಿಯ ಬಗ್ಗೆ ಟ್ವೀಟಿಸಿದ್ದು, 'ಕೋವಿಡ್‌ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಭಾರತ ಸರ್ಕಾರದೊಂದಿಗೆ ಕೈಜೋಡಿಸಿ ನಿಕಟ ಬೆಂಬಲ ನೀಡುತ್ತಿದ್ದೇವೆ. ಭಾರತದ ನಾಗರಿಕರು ಮತ್ತು ಆರೋಗ್ಯ ಕ್ಷೇತ್ರದ ಹೋರಾಟಗಾರರಿಗೆ ಹೆಚ್ಚುವರಿ ಬೆಂಬಲವನ್ನು ಕ್ಷಿಪ್ರವಾಗಿ ನಿಯೋಜಿಸುತ್ತೇವೆ' ಎಂದಿದ್ದಾರೆ.

ದೇಶದಲ್ಲಿ ಪ್ರಸ್ತುತ ಕೋವಿಡ್‌ ಸಕ್ರಿಯ ಪ್ರಕರಣಗಳ ಸಂಖ್ಯೆ 27 ಲಕ್ಷ ಸಮೀಪದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.