ವಾಷಿಂಗ್ಟನ್: ಭಾರತದ ಅಧಿಕಾರಿಗಳು ಮನವಿ ಮಾಡಿದರೆ, ಏರ್ ಇಂಡಿಯಾ ವಿಮಾನ ದುರಂತದ ತನಿಖೆಗೆ ಸಹಾಯ ಮಾಡಲು ತಂಡವನ್ನು ಕಳುಹಿಸಲಾಗುವುದು ಎಂದು ಅಮೆರಿಕ ಸರ್ಕಾರ ಗುರುವಾರ ಹೇಳಿದೆ.
ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್‌ಟಿಎಸ್‌ಬಿ) ಹಾಗೂ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಾಂತ್ರಿಕ ಸಹಾಯ ಒದಗಿಸಲು ಸಿದ್ಧವಿರುವುದಾಗಿ ಹೇಳಿವೆ.
ವಾರ್ಷಿಕ ಸುಮಾರು 450 ಅಂತರರಾಷ್ಟ್ರೀಯ ದುರಂತಗಳಿಗೆ ಕಾರಣವಾದ ಅಂಶಗಳನ್ನು ಪತ್ತೆ ಮಾಡಲು ಎನ್‌ಟಿಎಸ್‌ಬಿ ತಾಂತ್ರಿಕ ಸಹಾಯ ಒದಗಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.