ADVERTISEMENT

ಮಾಲ್ಡೀವ್ಸ್‌ ಜೊತೆ ಅಮೆರಿಕ ರಕ್ಷಣಾ ಸಹಕಾರ ಒಪ್ಪಂದ

ಪಿಟಿಐ
Published 12 ಸೆಪ್ಟೆಂಬರ್ 2020, 14:59 IST
Last Updated 12 ಸೆಪ್ಟೆಂಬರ್ 2020, 14:59 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ವಾಷಿಂಗ್ಟನ್‌:ಇಂಡೋ–ಪೆಸಿಫಿಕ್‌ ಭಾಗದಲ್ಲಿ ಚೀನಾಗೆ ಸಡ್ಡು ಹೊಡೆಯಲು, ಈ ಭಾಗದ ರಾಷ್ಟ್ರಗಳೊಂದಿಗೆ ಬಾಂಧ್ಯವ್ಯವನ್ನು ಮತ್ತಷ್ಟು ಬಲಪಡಿಸುವ ಅಮೆರಿಕ ನಿರ್ಧರಿಸಿದೆ. ಈ ಉದ್ದೇಶದಿಂದ, ಹಿಂದೂ ಮಹಾಸಾಗರದಲ್ಲಿ ಶಾಂತಿ ಹಾಗೂ ಭದ್ರತೆ ದೃಷ್ಟಿಯಿಂದ ಮಾಲ್ಡೀವ್ಸ್‌ ಜೊತೆ ಅಮೆರಿಕವು ರಕ್ಷಣಾ ಸಹಕಾರ ಒಪ್ಪಂದ ಮಾಡಿಕೊಂಡಿದೆ.

ರಕ್ಷಣಾ ಹಾಗೂ ಭದ್ರತಾ ಸಂಬಂಧದ ಚೌಕಟ್ಟಿಗೆ ಸೆ.10ರಂದು ಫಿಲಿಡೆಲ್ಫಿಯಾದಲ್ಲಿ ಅಮೆರಿಕದ ರಕ್ಷಣಾ ವಿಭಾಗದ(ದಕ್ಷಿಣ ಏಷ್ಯಾ) ಸಹಾಯಕ ಕಾರ್ಯದರ್ಶಿ ರೀಡ್‌ ವೆರ್ನರ್‌ ಹಾಗೂ ಮಾಲ್ಡೀವ್ಸ್‌ನ ರಕ್ಷಣಾ ಸಚಿವೆ ಮರಿಯಾ ದೀದಿ ಸಹಿ ಹಾಕಿದರು. ‘ಈ ಒಪ್ಪಂದವು ರಕ್ಷಣಾ ಪಾಲುದಾರಿಕೆಗೆ ಪ್ರಮುಖ ಹೆಜ್ಜೆಯಾಗಿದೆ’ ಎಂದು ಪೆಂಟಗನ್‌ ತಿಳಿಸಿದೆ.

ಸಂಪನ್ಮೂಲಭರಿತಇಂಡೋ–ಪೆಸಿಫಿಕ್‌ ಭಾಗದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಚೀನಾ ಪ್ರಯತ್ನಿಸುತ್ತಿದ್ದು, ಈಗಾಗಲೇ ಅರಬ್ಬಿ ಸಮುದ್ರದಲ್ಲಿ ಪಾಕಿಸ್ತಾನದ ಗ್ವಾದರ್ ಬಂದರನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಈ ಬೆಳವಣಿಗೆಗಳ ನಡುವೆಯೇ ಅಮೆರಿಕವೂ ಇಂಡೋ–ಪೆಸಿಫಿಕ್‌ ಭಾಗದಲ್ಲಿ ನಿಯಂತ್ರಣ ಸಾಧಿಸಲು ಹೆಜ್ಜೆ ಇರಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.