
ಅಮೆರಿಕ ವೀಸಾ
ಅಮರಾವತಿ/ಹೈದರಾಬಾದ್: ಅಮೆರಿಕದ ವೀಸಾ ತಿರಸ್ಕೃತಗೊಂಡಿದ್ದರಿಂದ ಖಿನ್ನತೆಗೆ ಒಳಗಾಗಿದ್ದ ಗುಂಟೂರು ಜಿಲ್ಲೆಯ 38 ವರ್ಷದ ವೈದ್ಯೆ ಡಾ. ರೋಹಿಣಿ ಅವರು ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ಇಂಟರ್ನಲ್ ಮೆಡಿಸಿನ್ ಓದಬೇಕು ಎಂಬ ಹಂಬಲ ಅವರಿಗಿತ್ತು.
‘ಎಷ್ಟೇ ಬಡಿದರೂ ಬಾಗಿಲು ತೆರೆಯುತ್ತಿಲ್ಲ ಎಂದು ಮನೆಗೆಲಸದವರು ರೋಹಿಣಿ ಅವರ ಕುಟುಂಬದವರಿಗೆ ನ.22ರಂದು ತಿಳಿಸಿದರು. ಪಕ್ಕದ ನಗರದಲ್ಲಿ ನೆಲೆಸಿದ್ದ ಕುಟುಂಬದವರೊಬ್ಬರು ಬಾಗಿಲು ಮುರಿದು ಒಳಹೋಗಿ ನೋಡಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.
‘ರೋಹಿಣಿ ಅವರು ಹೇಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕವೇ ತಿಳಿಯಲಿದೆ. ಅವರ ಮನೆಯಲ್ಲಿ ಮರಣ ಪತ್ರ ದೊರೆತಿದೆ. ವೀಸಾ ತಿರಸ್ಕೃತವಾಗಿದ್ದರಿಂದ ಖಿನ್ನತೆಗೆ ಒಳಪಟಿದ್ದರ ಕುರಿತು ಪತ್ರದಲ್ಲಿ ಬರೆಯಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.