ADVERTISEMENT

ತಮಿಳುನಾಡು ಜೊತೆ ಇಂಗ್ಲಿಷ್‌ನಲ್ಲೇ ಸಂವಹನ: ಮದ್ರಾಸ್‌ ಹೈಕೋರ್ಟ್‌ ಆದೇಶ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2021, 15:51 IST
Last Updated 12 ಸೆಪ್ಟೆಂಬರ್ 2021, 15:51 IST
ಕೋರ್ಟ್‌
ಕೋರ್ಟ್‌   

ಚೆನ್ನೈ: ತಮಿಳುನಾಡಿನ ಜೊತೆ ಸಂವಹನ ನಡೆಸುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಇಂಗ್ಲಿಷ್‌ ಮಾತ್ರ ಬಳಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠ ಆದೇಶಿಸಿದೆ.

‘ದಕ್ಷಿಣ ರಾಜ್ಯಗಳೊಂದಿಗೆ ಸಂವಹನ ನಡೆಸಲು ಕೇಂದ್ರ ಸರ್ಕಾರ ಇಂಗ್ಲಿಷ್‌ ಭಾಷೆಯನ್ನೇ ಬಳಸಬೇಕು. ಹಿಂದಿಯನ್ನು ಬಳಸಕೂಡದು’ ಎಂದು ಹೈಕೋರ್ಟ್‌ನ ಪೀಠವು ಆಗಸ್ಟ್‌ನಲ್ಲಿ ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯನ್ನು ಇತ್ತೀಚೆಗಷ್ಟೆ ಬಹಿರಂಗಪಡಿಸಲಾಗಿದೆ.

ಈ ಸಂಬಂಧ, ಮದುರೈ ಸಂಸದ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸು.ವೆಂಕಟೇಶನ್‌ ಅವರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಪೀಠ ಈ ಆದೇಶ ಹೊರಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.