ADVERTISEMENT

ಉತ್ತರ ಪ್ರದೇಶ: ಕೋಟಿಗಟ್ಟಲೆ ಹಣವಿರುವ ವಾರಸುದಾರರಿಲ್ಲದ ಬ್ಯಾಗ್‌ ಪತ್ತೆ

ಪಿಟಿಐ
Published 17 ಫೆಬ್ರುವರಿ 2021, 10:17 IST
Last Updated 17 ಫೆಬ್ರುವರಿ 2021, 10:17 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾನ್ಪುರ: ಉತ್ತರ ಪ್ರದೇಶದಲ್ಲಿ ಸ್ವತಂತ್ರ ಸಂಗ್ರಾಮ್‌ ಸೇನಾನಿ ವಿಶೇಷ ರೈಲಿನಲ್ಲಿ ₹1.4 ಕೋಟಿ ನಗದು ಇದ್ದ ವಾರಸುದಾರರಿಲ್ಲದ ಬ್ಯಾಗ್‌ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

‘ಮಂಗಳವಾರ ದೆಹಲಿಯಿಂದ ಬಿಹಾರದ ಜಯನಗರಕ್ಕೆ ಬರುತ್ತಿದ್ದ ರೈಲಿನಲ್ಲಿ ಈ ಬ್ಯಾಗ್‌ ಪತ್ತೆಯಾಗಿದೆ’ ಎಂದು ರೈಲ್ವೆ ಇಲಾಖೆಯ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಹಿಮಾಂಶು ಶೇಖರ್‌ ಮಾಹಿತಿ ನೀಡಿದ್ದಾರೆ.

‘ವಾರಸುದಾರರಿಲ್ಲದ ಕೆಂಪು ಬಣ್ಣದ ಟ್ರೋಲಿ ಬ್ಯಾಗ್‌ ಅನ್ನು ರೈಲಿನ ಆಹಾರ ಪೂರೈಕೆ ಸಿಬ್ಬಂದಿ ಗುರುತಿಸಿದ್ದಾರೆ. ಈ ಕುರಿತ ಮಾಹಿತಿಯನ್ನು ಅವರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆ. ಬಳಿಕ ಈ ಬ್ಯಾಗ್‌ ಅನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್‌) ಮತ್ತು ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್‌ಪಿ) ವಶಕ್ಕೆ ನೀಡಲಾಯಿತು. ಅವರು ರೈಲ್ವೆ ವಾಣಿಜ್ಯ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗನ್ನು ತೆರೆದು ಪರಿಶೀಲಿಸಿದರು. ಬ್ಯಾಗಿನ ತುಂಬ ಕರೆನ್ಸಿ ನೋಟುಗಳೇ ಆವರಿಸಿದ್ದವು’ ಎಂದು ಅವರು ಹೇಳಿದರು.

ADVERTISEMENT

‘ಈ ಬ್ಯಾಗಿನ ವಾರಸುದಾರರ ಬಗ್ಗೆ ಮಾಹಿತಿ ಲಭ್ಯವಿಲ್ಲ. ಅಲ್ಲದೆ ಯಾರೊಬ್ಬರು ಬ್ಯಾಗ್‌ ಕಾಣೆಯಾಗಿರುವ ಬಗ್ಗೆ ದೂರು ನೀಡಿಲ್ಲ’ ಎಂದು ಅವರು ತಿಳಿಸಿದರು. ಈ ಬಗ್ಗೆ ತನಿಖೆ ನಡೆಸುವಂತೆ ಐಟಿ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.