ADVERTISEMENT

ಉತ್ತರಪ್ರದೇಶದಲ್ಲಿ ಬಸಂತಪಂಚಮಿ: 'ಪವಿತ್ರಸ್ನಾನ' ಮಾಡಿದ ಯೋಗಿ ಆದಿತ್ಯನಾಥ್

ಏಜೆನ್ಸೀಸ್
Published 30 ಜನವರಿ 2020, 4:08 IST
Last Updated 30 ಜನವರಿ 2020, 4:08 IST
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್   

ಉತ್ತರಪ್ರದೇಶ: ಬಸಂತ ಪಂಚಮಿ ಪ್ರಯುಕ್ತ ಇಲ್ಲಿನ ಪ್ರಯಾಗ್ ರಾಜ್‌ನಸಂಗಮ ಕ್ಷೇತ್ರದಲ್ಲಿಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರದೇವ್ ಸಿಂಗ್ ಸೇರಿದಂತೆ ಹಲವರು 'ಪವಿತ್ರಸ್ನಾನ' ಮಾಡಿದೇವರಿಗೆ ಪೂಜೆ ನೆರವೇರಿಸಿದರು.

ಆದಿತ್ಯನಾಥ್ ಜೊತೆ ಅವರ ಮಂತ್ರಿ ಮಂಡಲದಲ್ಲಿ ಸಚಿವರಾಗಿರುವ ಸಿದ್ದಾರ್ಥನಾಥ್ ಸಿಂಗ್ ಕೂಡ ನದಿ ನೀರಿನಲ್ಲಿ ಮುಳುಗಿ ಏಳುವ ಮೂಲಕ ಪವಿತ್ರ ಸ್ನಾನದಲ್ಲಿ ಪಾಲ್ಗೊಂಡರು. ಬಸಂತ ಪಂಚಮಿ ದಿನವಾದ ಇಂದು ಉತ್ತರಪ್ರದೇಶದ ಹಲವೆಡೆ ವಸಂತನ ಆಗಮನವನ್ನು ಪೂಜೆ ಪುನಸ್ಕಾರಗಳ ಮೂಲಕ ಬರಮಾಡಿಕೊಳ್ಳಲಾಗುತ್ತದೆ. ಈ ದಿನ ದೇವಾಲಯಗಳಲ್ಲಿ ಸರಸ್ವತಿ ದೇವಿಗೆ ವಿಶೇಷ ಪೂಜೆ ನಡೆಯುತ್ತವೆ.

ಉತ್ತರಭಾರತದ ಹಲವೆಡೆ ಬಸಂತ ಪಂಚಮಿ ದಿನದ ನಂತರ 40 ದಿನಗಳಿಗೆ ಸರಿಯಾಗಿ ಹೋಳಿ ಆಚರಿಸಲಾಗುತ್ತದೆ. ಗಂಗಾ ಯಮುನಾ ನದಿಗಳು ಸೇರುವ ಪ್ರಯಾಗ್ ರಾಜ್ ಬಳಿಸಂಗಮದಲ್ಲಿ ಜನರು ಇಂದು ಪವಿತ್ರ ಸ್ನಾನದಲ್ಲಿ ಪಾಲ್ಗೊಂಡು ಭಕ್ತಿ ಭಾವಗಳಿಂದ ದೇವರಿಗೆ ಪೂಜೆ ನೆರವೇರಿಸುವುದು ವಾಡಿಕೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.