ADVERTISEMENT

ರೋಹಿಂಗ್ಯಾ ನಿರಾಶ್ರಿತರ ಶಿಬಿರ ತೆರವುಗೊಳಿಸಿದ ಉತ್ತರ ಪ್ರದೇಶ ಸರ್ಕಾರ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 14:44 IST
Last Updated 22 ಜುಲೈ 2021, 14:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನೋಯ್ಡಾ: ರೋಹಿಂಗ್ಯಾ ನಿರಾಶ್ರಿತರು ಉತ್ತರ ಪ್ರದೇಶದ ಭೂಮಿಯನ್ನುಅತಿಕ್ರಮಿಸಿಕೊಂಡು ನಿರ್ಮಿಸಿದ್ದ ಅಕ್ರಮ ಶಿಬಿರಗಳನ್ನು ಉತ್ತರ ಪ್ರದೇಶ ಸರ್ಕಾರ ಗುರುವಾರ ತೆರವುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೇಶದ ರಾಜಧಾನಿಗೆ ಹತ್ತಿರದ ನೋಯ್ಡಾದ ಮದನ್ಪುರ್‌ ಖಾದರ್‌ ಪ್ರದೇಶದಲ್ಲಿರುವ, ಉತ್ತರಪ್ರದೇಶ ಸರ್ಕಾರದ ನೀರಾವರಿ ಇಲಾಖೆಗೆ ಸೇರಿದ ಅಂದಾಜು ₹97 ಕೋಟಿ ಬೆಲೆ ಬಾಳುವ 2.10 ಹೆಕ್ಟೇರ್‌ ಭೂಮಿಯನ್ನು ರೋಹಿಂಗ್ಯಾ ಸಮುದಾಯದವರು ಅತಿಕ್ರಮಿಸಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಉತ್ತರಪ್ರದೇಶದ ಜಲಶಕ್ತಿ ಸಚಿವ ಮಹೇಂದ್ರ ಸಿಂಗ್‌ ಅವರ ಆದೇಶದ ಅನುಸಾರ ಅತಿಕ್ರಮಣ ತೆರವುಗೊಳಿಸಲಾಗಿದೆ. ತೆರವು ಕಾರ್ಯಾಚರಣೆಯ ದೃಶ್ಯದ ತುಣುಕನ್ನು ಸಚಿವರು ಸಾಮಾಜಿಕ ಜಾಲತಾಣದಲ್ಲಿ ಬೆಳಿಗ್ಗೆ ಹಂಚಿಕೊಂಡಿದ್ದಾರೆ.

ADVERTISEMENT

‘ಮದನ್ಪುರ್ ಖಾದರ್‌ನಲ್ಲಿರುವ,ನೀರಾವರಿ ಇಲಾಖೆಗೆ ಸೇರಿದ 2.10 ಹೆಕ್ಟೇರ್ ಭೂಮಿಯಲ್ಲಿ ರೋಹಿಂಗ್ಯಾ ಸಮುದಾಯದವರ ಅಕ್ರಮ ಶಿಬಿರಗಳನ್ನು ಮುಂಜಾನೆ 4 ಗಂಟೆಗೆ ತೆರವುಗೊಳಿಸಲಾಯಿತು’ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶ ಸರ್ಕಾರದ ಅಧಿಕಾರಿಗಳ ತಂಡ ಜುಲೈ 20ರಂದೇ ದೆಹಲಿ ಆಡಳಿತದೊಂದಿಗೆ ಸಭೆ ನಡೆಸಿ, ಒತ್ತುವರಿ ತೆರವಿಗೆ ಯೋಜನೆ ರೂಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.