ADVERTISEMENT

ಪ್ರಾಣಕ್ಕೇ ಎರವಾದ ಮೊಟ್ಟೆ ಸೇವನೆ ಚಾಲೆಂಜ್: ಉತ್ತರ ಪ್ರದೇಶದಲ್ಲಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 5:36 IST
Last Updated 5 ನವೆಂಬರ್ 2019, 5:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜೌನ್‌ಪುರ:ಸ್ನೇಹಿತರಿಬ್ಬರ ನಡುವಣ ಮೊಟ್ಟೆ ತಿನ್ನುವ ಚಾಲೆಂಜ್ ಪ್ರಾಣಕ್ಕೇ ಎರವಾದ ದಾರುಣ ಘಟನೆ ಉತ್ತರ ಪ್ರದೇಶದ ಜೌನ್‌ಪುರದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಸುಭಾಷ್ ಯಾದವ್ (42) ಎಂದು ಗುರುತಿಸಲಾಗಿದೆ.

ಸುಭಾಷ್ ಅವರು ಸ್ನೇಹಿತನ ಜತೆಗೂಡಿ ಜೌನ್‌ಪುರದ ಬಾಬಿಗಂಜ್‌ ಮಾರುಕಟ್ಟೆಗೆ ಮೊಟ್ಟೆ ಸೇವಿಸಲೆಂದು ತೆರಳಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೊನೆಗೆ ₹ 2,000 ಬಹುಮಾನಕ್ಕೆ 50 ಮೊಟ್ಟೆ ತಿನ್ನುವ ಚಾಲೆಂಜ್ ಇಟ್ಟುಕೊಂಡಿದ್ದಾರೆ.

ADVERTISEMENT

ಸವಾಲನ್ನು ಸ್ವೀಕರಿಸಿದ ಸುಭಾಷ್ 41 ಮೊಟ್ಟೆಗಳನ್ನು ತಿಂದು 42ನೇಯದ್ದನ್ನು ತಿನ್ನುತ್ತಿರುವಾಗ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಅವರನ್ನು ಸಂಜಯ್ ಗಾಂಧಿ ವೈದ್ಯಕೀಯ ವಿಜ್ಞಾನಗಳ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಅವರು ಮೃತಪಟ್ಟಿದ್ದಾರೆ.

‘ಅತಿಯಾದ ಆಹಾರ ಸೇವನೆಯಿಂದ ಸುಭಾಷ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಕುರಿತು ಸುಭಾಷ್ ಕುಟುಂಬದವರು‍ಪ್ರತಿಕ್ರಿಯೆ ನೀಡಿಲ್ಲ’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.