ADVERTISEMENT

ಉತ್ತರ ಪ್ರದೇಶ‌: ಗುಂಡು ಹಾರಿಸಿಕೊಂಡು ತಹಶೀಲ್ದಾರ್‌ ಆತ್ಮಹತ್ಯೆಗೆ ಯತ್ನ

ಪಿಟಿಐ
Published 3 ಸೆಪ್ಟೆಂಬರ್ 2025, 10:36 IST
Last Updated 3 ಸೆಪ್ಟೆಂಬರ್ 2025, 10:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>
   

ಪ್ರಾತಿನಿಧಿಕ ಚಿತ್ರ

ಲಖನೌ: ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಿಯೋಜಿತರಾಗಿದ್ದ ನಯೀಬ್ ತಹಶೀಲ್ದಾರ್ ಬುಧವಾರ ಬೆಳಿಗ್ಗೆ ತಮ್ಮ ಸರ್ಕಾರಿ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸದರ್ ತಹಶೀಲ್‌ನಲ್ಲಿ ನಿಯೋಜಿತರಾಗಿದ್ದ ರಾಜ್‌ಕುಮಾರ್, ತಮ್ಮ ಅಧಿಕೃತ ನಿವಾಸದ ಕೋಣೆಯೊಳಗೆ ಬೀಗ ಹಾಕಿಕೊಂಡು ಗುಂಡು ಹಾರಿಸಿಕೊಂಡಿದ್ದಾರೆ. 15-20 ನಿಮಿಷಗಳ ನಂತರ ಕುಟುಂಬಸ್ಥರು ಬಾಗಿಲು ಒಡೆದು ಗಂಭೀರ ಸ್ಥಿತಿಯಲ್ಲಿದ್ದ ರಾಜ್‌ಕುಮಾರ್ ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ಎಸ್‌ಪಿ ಅಭಿಷೇಕ್ ಝಾ ಹೇಳಿದ್ದಾರೆ.

ADVERTISEMENT

ಸದ್ಯಕ್ಕೆ ರಾಜ್‌ಕುಮಾರ್ ಕೋಣೆಯಲ್ಲಿದ್ದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣ ಸಂಬಂಧ ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.