ADVERTISEMENT

ಉತ್ತರಪ್ರದೇಶ: ಸೈಬರ್‌ ಸೆಂಟರ್‌ನಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ

ಪಿಟಿಐ
Published 27 ಸೆಪ್ಟೆಂಬರ್ 2021, 13:44 IST
Last Updated 27 ಸೆಪ್ಟೆಂಬರ್ 2021, 13:44 IST
   

ಕನೌಜ್:‌ಸೈಬರ್‌ಸೆಂಟರ್‌ಗೆ ತೆರಳಿದ್ದ ಇಬ್ಬರು ಹುಡುಗಿಯರಮೇಲೆಸಾಮೂಹಿಕ ಅತ್ಯಾಚಾರವೆಸಗಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ನಾಲ್ವರು ಆರೋಪಿಗಳುವಿದ್ಯಾರ್ಥಿನಿಯರನ್ನು ಸೆಪ್ಟೆಂಬರ್‌13 ರಂದು ಒತ್ತೆಯಾಗಿರಿಸಿಕೊಂಡು ಅತ್ಯಾಚಾರವೆಸಗಿದ್ದರು.‌ ಅವರಲ್ಲೊಬ್ಬ ಕೃತ್ಯದ ಚಿತ್ರೀಕರಣ ಮಾಡಿಕೊಂಡಿದ್ದ. ಅಷ್ಟಲ್ಲದೆ,ವಿಡಿಯೊವನ್ನು ವೈರಲ್‌ ಮಾಡುವುದಾಗಿ ಬೆದರಿಸಿ,ಆರೋಪಿಗಳು ಸಂತ್ರಸ್ತ ಬಾಲಕಿಯರಿಂದ ₹10,000 ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧಸಂತ್ರಸ್ತ ಬಾಲಕಿನೀಡಿದ ದೂರಿನ ಆಧಾರದ ಮೇಲೆ, ಮಹಿಳೆ ಸೇರಿದಂತೆ ಒಟ್ಟು ಆರು ಜನರ ವಿರುದ್ಧಸರ್ದಾರ್‌ ಕೊತ್ವಾಲಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ (ಎಸ್‌ಪಿ) ಪ್ರಶಾಂತ್‌ ವರ್ಮಾ ಹೇಳಿದ್ದಾರೆ.

ADVERTISEMENT

ಸೆಪ್ಟೆಂಬರ್‌13ರಂದು ನಾನುನನ್ನ ಸ್ನೇಹಿತೆಯೊಂದಿಗೆಸೈಬರ್‌ ಸೆಂಟರ್‌ಗೆ ಹೋಗಿದ್ದೆ.ಆಗ ಅಲ್ಲೇ ಇದ್ದ ನಾಲ್ವರು ನಮ್ಮ ಮೇಲೆ ಅತ್ಯಾಚಾರವೆಸಗಿದರು ಎಂದು17 ವರ್ಷದ ವಿದ್ಯಾರ್ಥಿನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ದೂರು ನೀಡಿದ ಬಾಲಕಿ ಮತ್ತು ಆಕೆಯ ಸ್ನೇಹಿತೆತಮ್ಮ ಮನೆಗಳಲ್ಲಿ ಹಣ ಕಳವು ಮಾಡಿ ಆರೋಪಿಗಳಿಗೆ ನೀಡಿರುವುದಾಗಿಯೂಪೊಲೀಸರಿಗೆ ತಿಳಿಸಲಾಗಿದೆ.ಘಟನೆಯ (ಅತ್ಯಾಚಾರ) ಬಳಿಕ ಆರೋಪಿಯೊಬ್ಬನ ಪತ್ನಿ ತನಗೆ ಕರೆ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಕೊಳ್ಳುವಂತೆ ಪೀಡಿಸುತ್ತಿದ್ದುದಾಗಿಯೂ ಬಾಲಕಿ ಹೇಳಿಕೆ ನೀಡಿದ್ದಾಳೆ.

ಹಣ ಕಾಣೆಯಾಗಿರುವುದು ಮನೆಗಳಲ್ಲಿಗೊತ್ತಾದನಂತರಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.

ಸದ್ಯಪರೀಕ್ಷೆಯ ಸಲುವಾಗಿ ಸಂತ್ರಸ್ತೆಯರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.

ಸೈಬರ್‌ ಸೆಂಟರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದಬಗ್ಗೆ ಪೊಲೀಸರಲ್ಲಿ ಅನುಮಾನಗಳು ಮೂಡಿವೆ ಎಂದಿರುವ ಎಸ್‌ಪಿ,ಸಾಧ್ಯವಿರುವ ಎಲ್ಲ ಸ್ಥಳಗಳಲ್ಲಿಯೂ ತನಿಖೆ ನಡೆಸಲಾಗುವುದು. ಆರೋಪಿಗಳ ಸೆರೆಗೆ ಬಲೆ ಬೀಸಿದ್ದೇವೆ ಎಂದೂಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.