ADVERTISEMENT

ಉತ್ತರಪ್ರದೇಶ: ಹಿಂದೂ ಮಹಾಸಭಾ ಅಧ್ಯಕ್ಷನ ಗುಂಡಿಕ್ಕಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2020, 6:46 IST
Last Updated 2 ಫೆಬ್ರುವರಿ 2020, 6:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ನಗರದ‌ ಹಜರತ್‌ಗಂಜ್‌ ಪ್ರದೇಶದಲ್ಲಿ ಭಾನುವಾರ ಅಖಿಲ ಭಾರತಹಿಂದೂ ಮಹಾಸಭಾಅಧ್ಯಕ್ಷ ರಂಜೀತ್‌ ಬಚ್ಚನ್ ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಗೋರಖ್‌ಪುರ ಜಿಲ್ಲೆಯ ನಿವಾಸಿ ರಂಜೀತ್‌ ಬಚ್ಚನ್ ಸಹಚರನೊಂದಿಗೆ ಬೆಳಿಗ್ಗೆ ನಡೆದುಕೊಂಡು ಹೋಗುತ್ತಿದ್ದಾಗ ಸೆಂಟ್ರಲ್ ಡ್ರಗ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (ಸಿಡಿಆರ್‌ಐ) ಕಟ್ಟಡದ ಬಳಿ ಆಗಂತುಕರುಕೃತ್ಯ ನಡೆಸಿ ಪರಾರಿಯಾಗಿದ್ದಾರೆ.

ದುಷ್ಕರ್ಮಿಗಳು ಬಚ್ಚನ್‌ ತಲೆಗೆ ಗುಂಡು ಹಾರಿಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಳಿ ಬಳಿಕ ಆರೋಪಿಗಳುಬಚ್ಚನ್‌ ಬಳಿ ಇದ್ದ ಚಿನ್ನದ ಸರ ಹಾಗೂ ಮೊಬೈಲ್‌ ಫೋನ್‌ಕಸಿದುಕೊಳ್ಳಲುಪ್ರಯತ್ನಿಸಿದ್ದಾರೆ ಎಂದು ತನಿಖಾ ತಂಡದ ಸಬ್‌ಇನ್ಸ್‌ಪೆಕ್ಟರ್‌ ತಿಳಿಸಿದ್ದಾರೆ.

ADVERTISEMENT

ರಂಜಿತ್‌ ಬಚ್ಚನ್‌ ಅವರ ತಲೆಗೆ ಗುಂಡು ತಗುಲಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಮತ್ತೊಬ್ಬ ವ್ಯಕ್ತಿ ಆಪಾಯದಿಂದ ಪಾರಾಗಿದ್ದಾನೆ ಎಂದು ಲಖನೌ ಕೇಂದ್ರ ವಿಭಾಗದ ಪೊಲೀಸ್‌ ಆಯುಕ್ತ ದಿನೇಶ್‌ ಸಿಂಗ್‌ ಹೇಳಿದ್ದಾರೆ.

ಪ್ರಕರಣ ಸಂಬಂಧ ಸ್ಥಳದಲ್ಲಿ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.ಪ್ರಕರಣದ ತನಿಖೆ ಮತ್ತು ಆರೋಪಿಗಳ ಪತ್ತೆಗಾಗಿ ಆರು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಲಖನೌದಲ್ಲಿ ನಡೆದ ಬಲಪಂಥೀಯ ಹಿಂದೂ ನಾಯಕನ ಎರಡನೇ ಹತ್ಯೆ ಇದಾಗಿದೆ.

ಹಿಂದೂ ಸಮಾಜ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಕಮಲೇಶ್‌ ತಿವಾರಿ ಅವರನ್ನು ಕಳೆದ ಅಕ್ಟೋಬರ್‌ನಲ್ಲಿ ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.