ADVERTISEMENT

ಅತ್ಯಾಚಾರ ಪ್ರಕರಣದಲ್ಲಿ ಬಿಎಸ್‌ಪಿ ಮಾಜಿ ಶಾಸಕನಿಗೆ 7 ವರ್ಷ ಜೈಲು

ಐಎಎನ್ಎಸ್
Published 9 ಡಿಸೆಂಬರ್ 2022, 2:10 IST
Last Updated 9 ಡಿಸೆಂಬರ್ 2022, 2:10 IST
   

ಹರ್ದೊಯಿ(ಉತ್ತರಪ್ರದೇಶ): 16 ವರ್ಷದ ಹಿಂದಿನ ಸಾಮೂಹಿಕ ಅತ್ಯಾಚಾರ ಪ್ರಕರಣವೊಂದರಲ್ಲಿ ಬಹುಜನ ಸಮಾಜವಾದಿ ಪಕ್ಷದ(ಬಿಎಸ್‌ಪಿ) ಮಾಜಿ ಶಾಸಕ ಸತ್ಯ ನಾರಾಯಣ ಸಂತು ಮತ್ತು ಇತರ ಆರು ಸಹಚರರಿಗೆ ಸ್ಥಳೀಯ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.


ಸತ್ಯ ನಾರಾಯಣ 2002ರಿಂದ 2007ರವರೆಗೆ ಶಾಸಕರಾಗಿದ್ದರು. 2006ರ ಮಾ.11ರಂದು ಮಹಿಳೆಯೊಬ್ಬರು ಇವರ ವಿರುದ್ಧ ಔಟ್ರೌಲಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.


ಹರ್ದೊಯಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್‌ ನ್ಯಾಯಾಧೀಶ ಸತ್ಯ ಡಿಯೊ ಗುಪ್ತಾ ಮಾಜಿ ಶಾಸಕನಿಗೆ ಜೈಲು ಶಿಕ್ಷೆ ವಿಧಿಸಿ ₹5,000 ದಂಡ ವಿಧಿಸಿದೆ. 16 ವರ್ಷದ ಹಿಂದಿನ ಪ್ರಕರಣದಲ್ಲಿ ಮಾಜಿ ಶಾಸಕ ಮತ್ತು ಆತನ ಸಹಚರರು ಮಹಿಳೆಯ ಪತಿ ಮತ್ತು ಮಗನನ್ನು ಕೂಡಿ ಹಾಕಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಪೊಲೀಸ್‌ ಹಿರಿಯ ಅಧಿಕಾರಿಗಳು ನ್ಯಾಯಾಲಯಕ್ಕೆ ಘಟನೆ ವಿವರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.