ಉತ್ತರಾಖಂಡದ ಹಲವೆಡೆ ಭೀಕರ ಮೇಘಸ್ಫೋಟ ಸಂಭವಿಸಿದೆ
ಪಿಟಿಐ ಚಿತ್ರ
ಹಲವಾರು ರಸ್ತೆ, ಸೇತುವೆ, ಹೊಟೇಲ್ ಮತ್ತು ಅಂಗಡಿಗಳು ತೀವ್ರವಾಗಿ ಹಾನಿಗೊಂಡಿವೆ.
ಡೆಹ್ರಾಡೂನ್ ಸಮೀಪದ ಪ್ರವಾಸಿತಾಣ ಸಹಸ್ತ್ರಧಾರದಲ್ಲಿ ಮೇಘಸ್ಫೋಟವಾಗಿದೆ.
ಭಾರಿ ಮಳೆಯಿಂದಾಗಿ 10 ಮಂದಿ ಮೃತಪಟ್ಟಿದ್ದು, ಹಲವು ಮಂದಿ ನಾಪತ್ತೆಯಾಗಿದ್ದಾರೆ
ಮಣ್ಣಿನಡಿ ಜೆಸಿಬಿ ಯಂತ್ರವೊಂದು ಹುದುಗಿಹೋಗಿರುವುದು
ಚಮೋಲಿ, ಚಂಪಾವತ್, ಉದಮ್‌ಸಿಂಗ್ ನಗರ, ಬಗೇಶ್ವರ್, ನೈನಿತಾಲ್ ಮತ್ತು ಡೆಹ್ರಾಡೂನ್ ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ
ಮೇಘಸ್ಪೋಟದಿಂದ ಮನೆಗಳ ಮೇಲೆ ಭಾರಿ ಪ್ರಮಾಣದಲ್ಲಿ ಕಲ್ಲು, ಮಣ್ಣು ಶೇಖರಣೆಯಾಗಿದೆ
ಸೇತುವೆ ಕೊಚ್ಚಿಹೋದ ಕಾರಣ ಡೆಹ್ರಾಡೂನ್–ಪಒಂಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ.
ಡೆಹ್ರಾಡೂನ್–ಮುಸ್ಸೋರಿ ರಸ್ತೆಯಲ್ಲಿ ಹಲವೆಡೆ ಭೂಕುಸಿತವಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ
ಸೆ.21ರವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.