ADVERTISEMENT

ಹರಿದ್ವಾರ: ಆಮ್ಲಜನಕ ಕೊರತೆಯಿಂದ ಐವರ ಸಾವು

ಪಿಟಿಐ
Published 5 ಮೇ 2021, 5:46 IST
Last Updated 5 ಮೇ 2021, 5:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಡೆಹ್ರಾಡೂನ್‌/ಹರಿದ್ವಾರ: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದರಿಂದ ಐವರು ಕೋವಿಡ್‌–19 ರೋಗಿಗಳು ಸಾವಿಗೀಡಾಗಿರುವ ಘಟನೆ ಹರಿದ್ವಾರ ಜಿಲ್ಲೆಯ ರೂರ್ಕಿಯ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.

ಒಬ್ಬ ರೋಗಿಗೆ ವೆಂಟಿಲೇಟರ್‌ ನೀಡಲಾಗಿತ್ತು. ಉಳಿದ ನಾಲ್ವರು ಆಮ್ಲಜನಕ ಸೌಲಭ್ಯ ಹೊಂದಿದ್ದ ಹಾಸಿಗೆಯಲ್ಲಿದ್ದರು ಎಂದು ವೈದ್ಯರೊಬ್ಬರು ತಿಳಿಸಿದ್ದಾರೆ.

ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದೆ. ಜತೆಗೆ, ಆಸ್ಪತ್ರೆಯಲ್ಲಿನ ವೈದ್ಯಕೀಯ ಸೌಲಭ್ಯಗಳ ಕುರಿತು ಪರಿಶೀಲನೆ ಕೈಗೊಳ್ಳಲು ರೂರ್ಕಿಯ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಒಂದು ವಾರದಲ್ಲಿ ಈ ತಂಡ ವರದಿ ನೀಡಲಿದೆ ಎಂದು ಹರಿದ್ವಾರ ಜಿಲ್ಲಾಧಿಕಾರಿ ಸಿ. ರವಿಶಂಕರ್‌ ತಿಳಿಸಿದ್ದಾರೆ.

ADVERTISEMENT

ಈ ಘಟನೆಗೆ ಹೊಣೆಯಾದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.