ADVERTISEMENT

ರೈತರಿಗೆ ಲಾಭಾಂಶ ನೀಡಿ: ಬಾಬಾ ರಾಮ್‌ದೇವ್‌ಗೆ ಕೋರ್ಟ್‌ ಸೂಚನೆ

ಪಿಟಿಐ
Published 29 ಡಿಸೆಂಬರ್ 2018, 20:12 IST
Last Updated 29 ಡಿಸೆಂಬರ್ 2018, 20:12 IST
ರಾಮ್‌ದೇವ್
ರಾಮ್‌ದೇವ್   

ನೈನಿತಾಲ್‌: ಯೋಗ ಗುರು ಬಾಬಾ ರಾಮ್‌ದೇವ್‌ ಅವರಿಗೆ ಸೇರಿದ ಕಂಪನಿ ತನ್ನ ಲಾಭಾಂಶದ ಸ್ವಲ್ಪ ಭಾಗವನ್ನು ಸ್ಥಳೀಯ ರೈತರು ಮತ್ತು ಜನರಿಗೆ ಹಂಚಬೇಕು ಎಂದು ಉತ್ತರಾಖಂಡ ಹೈಕೋರ್ಟ್‌ ಆದೇಶಿಸಿದೆ.

ಉತ್ತರಾಖಂಡದ ಜೀವವೈವಿಧ್ಯ ಮಂಡಳಿ (ಯುಬಿಬಿ) ನಿರ್ದೇಶನವನ್ನು ಪ್ರಶ್ನಿಸಿ ದಿವ್ಯಾ ಫಾರ್ಮಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದು, ಜೈವಿಕ ವೈವಿಧ್ಯ ಕಾಯ್ದೆ 2002ರ ಅನುಸಾರ ಸ್ಥಳೀಯ ಜನರಿಗೆ ಲಾಭಾಂಶ ಹಂಚಿಕೆ ಮಾಡಬೇಕು ಎಂದು ತಿಳಿಸಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧಾಂಶು ಧೂಲಿಯಾ, ಆಯುರ್ವೇದ ಮತ್ತು ನೈಸರ್ಗಿಕ ಉತ್ಪನ್ನಗಳನ್ನು ತಯಾರಿಸುವಾಗ ಸ್ಥಳೀಯ ಕಚ್ಚಾ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಹಾಗಾಗಿ ಕಚ್ಚಾ ಸಾಮಗ್ರಿ ಒದಗಿಸಿದ ಸ್ಥಳೀಯ ರೈತರಿಗೆ ಕಂಪನಿ ತನ್ನ ₹ 421 ಕೋಟಿ ಲಾಭಾಂಶದಲ್ಲಿ ₹ 2ಕೋಟಿ ಹಂಚಬೇಕು ಎಂದು ಸೂಚಿಸಿದೆ.

ADVERTISEMENT

ಜೀವವೈವಿಧ್ಯ ಕಾಯ್ದೆ ಅನುಸಾರ ದಿವ್ಯಾ ಫಾರ್ಮಸಿ ತನ್ನ ಲಾಭಾಂಶವನ್ನು ಸ್ಥಳೀಯರಿಗೆ ಹಂಚಬೇಕು ಎಂದು ಉತ್ತರಾಖಂಡ ಜೀವವೈವಿಧ್ಯ ಮಂಡಳಿ ಆದೇಶಿಸಿತ್ತು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ದಿವ್ಯಾ ಫಾರ್ಮಸಿ, ಮಂಡಳಿಗೆ ಈ ಆದೇಶ ಹೊರಡಿಸುವ ಅಧಿಕಾರ ಇಲ್ಲವೆಂದು ವಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.