ಡೆಹ್ರಾಡೂನ್: ಉತ್ತರಾಖಂಡದ ಚಕರಾತಾ ಸಮೀಪ ನಡೆದಿರುವ ಅಪಘಾತದಲ್ಲಿ ಕನಿಷ್ಠ 11 ಮಂದಿ ಸಾವಿಗೀಡಾಗಿದ್ದು, 4 ಜನ ಗಾಯಗೊಂಡಿರುವುದು ವರದಿಯಾಗಿದೆ. ಪ್ರಯಾಣಿಕರು ಸಾಗುತ್ತಿದ್ದ ವಾಹನವು ಕಂದಕ್ಕೆ ಉರುಳಿದ ಪರಿಣಾಮ ಸಾವು ಸಂಭವಿಸಿದೆ.
ರಾಜಧಾನಿ ಡೆಹ್ರಾಡೂನ್‌ನಿಂದ ಸುಮಾರು 170 ಕಿ.ಮೀ ದೂರದ ಗ್ರಾಮೀಣ ಭಾಗದಲ್ಲಿ ಈ ಅಪಘಾತ ಆಗಿದ್ದು, ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ವಿಪತ್ತು ನಿರ್ವಹಣಾ ಪಡೆ ಹಾಗೂ ಪೊಲೀಸರು ಸ್ಥಳದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.