ADVERTISEMENT

ಲೋಕಾಯುಕ್ತ ವ್ಯಾಪ್ತಿಗೆ ಉತ್ತರಪ್ರದೇಶ ಸಿ.ಎಂ ಕಚೇರಿ: ಕಾನೂನು ತಿದ್ದುಪಡಿಗೆ ಅರ್ಜಿ

ಪಿಟಿಐ
Published 7 ಅಕ್ಟೋಬರ್ 2018, 19:39 IST
Last Updated 7 ಅಕ್ಟೋಬರ್ 2018, 19:39 IST

ನವದೆಹಲಿ: ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಕಚೇರಿಯನ್ನು ರಾಜ್ಯ ಲೋಕಾಯುಕ್ತದ ವ್ಯಾಪ್ತಿಗೆ ತರಲು ಕಾನೂನು ತಿದ್ದುಪಡಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಭ್ರಷ್ಟಾಚಾರ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಮುಖ್ಯಮಂತ್ರಿ ಅವರನ್ನೂ ಲೋಕಾಯುಕ್ತದ ವ್ಯಾಪ್ತಿಗೆ ತರಲು ಕಾನೂನು ತಿದ್ದುಪಡಿ ಅಗತ್ಯ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ವಕೀಲ ಶಿವಕುಮಾರ್‌ ತ್ರಿಪಾಠಿ ಹೇಳಿದ್ದಾರೆ.

ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳು, ಖಾಸಗಿ ಸಂಸ್ಥೆ, ಮಂಡಳಿ, ಆಯೋಗಗಳನ್ನೂ ಲೋಕಾಯುಕ್ತದ ಪರಿಮಿತಿಯೊಳಗೆ ತರಬೇಕು ಎಂದೂ ಅವರು ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.