ADVERTISEMENT

ಕುಂಟುತ್ತಾ ಸಾಗಿರುವ ಆನೆ, ಸೈಕಲ್ ತಳ್ಳುತ್ತಿರುವ ಅಖಿಲೇಶ್

​ಪ್ರಜಾವಾಣಿ ವಾರ್ತೆ
Published 23 ಮೇ 2019, 5:18 IST
Last Updated 23 ಮೇ 2019, 5:18 IST
   

ನವದೆಹಲಿ: ಉತ್ತರಪ್ರದೇಶ ಲೋಕಸಭಾ ಕ್ಷೇತ್ರದಲ್ಲಿ 35 ರಲ್ಲಿ ಮುಂದಿದೆ. ಎಸ್‌‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟ 27 ಕ್ಷೇತ್ರಗಳಲ್ಲಿ ಮುಂದಿದ್ದಾರೆ. ಉತ್ತರ ಪ್ರದೇಶದಲ್ಲಿ ಯಾರು ಅಧಿಕ ಸ್ಥಾನಗಳನ್ನು ಪಡೆಯುತ್ತಾರೋ ಅವರು ಪ್ರಧಾನಿ ಗದ್ದುಗೆಗೆ ಏರುತ್ತಾರೆ ಎಂಬ ಮಾತಿದೆ. ಅದರಂತೆ ಕಳೆದ ಬಾರಿ ಬಿಜೆಪಿ ಅಧಿಕ ಸ್ಥಾನಗಳನ್ನು ಪಡೆದು ಮೋದಿ ಪ್ರಧಾನಿ ಹುದ್ದೆಗೆ ಏರಿದ್ದರು. ಈ ಬಾರಿ ಬಿಜೆಪಿ ಮುಂದಿದೆ.

ಮೈತ್ರಿಕೂಟದ ಮಾಯಾವತಿ 15 ಕ್ಷೇತ್ರಗಳಲ್ಲಿ ಮುಂದಿದ್ದರೆ, ಅಖಿಲೇಶ್ ಯಾದವ್ 12 ಕ್ಷೇತ್ರಗಳಲ್ಲಿ ಮುಂದಿದ್ದಾರೆ. 2014ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಅಪ್ನಾ ದಳ 73 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿತ್ತು. ಸಮಾಜವಾದಿ ಪಾರ್ಟಿ ಐದು ಕ್ಷೇತ್ರಗಳಲ್ಲಿ, ಬಿಎಸ್‌‌ಪಿ ತನ್ನ ಖಾತೆಯನ್ನೇ ತೆಗೆದಿರಲಿಲ್ಲ.

ಎರಡು ದಿನಗಳ ಹಿಂದೆ ಬಂದ ಸಮೀಕ್ಷೆಗಳ ಪ್ರಕಾರ ಎನ್‌‌ಡಿಎ 58 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದು, ಯುಪಿಎ 2 ಕ್ಷೇತ್ರಗಳಲ್ಲಿ ಜಯಸಾಧಿಸಲಿದೆ. ಮಾಯಾವತಿ ಮತ್ತು ಅಖಿಲೇಶ್ ಯಾದವ್ ಪಕ್ಷಗಳು 20 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ.

ADVERTISEMENT

ಆದರೆ, ಎಬಿಪಿ-ಎಸಿ ನೆಲ್ಸನ್ ಸಮೀಕ್ಷೆ ಪ್ರಕಾರ 22 ಕ್ಷೇತ್ರಗಳಲ್ಲಿ ಬಿಜೆಪಿ ಜಯಸಾಧಿಸಲಿದ್ದು, 56 ಕ್ಷೇತ್ರಗಳಲ್ಲಿ ಎಸ್ ಪಿ ಮತ್ತು ಬಿಎಸ್ ಪಿ ಮೈತ್ರಿಕೂಟ 56 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ.ರಿಪಬ್ಲಿಕ್ ಟಿವಿ-ಸಿವೋಟರ್ ನಡೆಸಿದ ಸಮೀಕ್ಷೆಯಲ್ಲಿ ಎನ್ ಡಿಎ 38 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದು, ಎಸ್‌‌ಪಿ- ಬಿಎಸ್‌‌ಪಿ ಮೈತ್ರಿಕೂಟ 40 ಕ್ಷೇತ್ರಗಳಲ್ಲಿ ಜಯಸಾಧಿಸಲಿದ್ದಾರೆ ಎಂದು ಹೇಳಿದೆ. ರಿಪಬ್ಲಿಕ್ -ಜನ್ ಕಿ ಬಾತ್ 46-57 ಎನ್ ಡಿಎ, ಯುಪಿಎ 2-4, ಮತ್ತು ಇತರರು 21-32 ಕ್ಷೇತ್ರಗಳನ್ನು ಪಡೆಯಲಿದ್ದಾರೆ ಎಂದು ತಿಳಿಸಿದೆ.

ಇವೆಲ್ಲಾ ಬೆಳವಣಿಗೆಗಳಿಂದ ಮಾಯಾವತಿ-ಅಖಿಲೇಶ್ ಯಾದವ್ ಅವರ ಲೆಕ್ಕಾಚಾರ ಉಲ್ಟಾ ಹೊಡೆಯುತ್ತಾ ಎಂಬುದನ್ನು ಕಾದುನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.