ADVERTISEMENT

ಮೌಂಟ್‌ ಬ್ಯಾಟನ್‌ ಮೆಚ್ಚಿಸಲು ನೆಹರೂ ಪಿಒಕೆ ವಶಪಡಿಸಿಕೊಂಡಿಲ್ಲ: ವಿ.ಕೆ.ಸಿಂಗ್

ಕೇಂದ್ರ ಸಚಿವ ವಿ.ಕೆ. ಸಿಂಗ್ ಆರೋಪ

ಪಿಟಿಐ
Published 25 ನವೆಂಬರ್ 2022, 14:43 IST
Last Updated 25 ನವೆಂಬರ್ 2022, 14:43 IST
ವಿ.ಕೆ.ಸಿಂಗ್‌
ವಿ.ಕೆ.ಸಿಂಗ್‌   

ಮುಂಬೈ: ಬ್ರಿಟಿಷ್‌ ಅಧಿಕಾರಿ ಮೌಂಟ್‌ ಬ್ಯಾಟನ್‌ ಅವರನ್ನು ಮೆಚ್ಚಿಸಲುಜವಾಹರ್‌ಲಾಲ್ ನೆಹರೂ ನೇತೃತ್ವದ ಸರ್ಕಾರ 1948ರ ಯುದ್ಧದ ಬಳಿಕ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ವಶಕ್ಕೆ ಪಡೆದುಕೊಳ್ಳಲಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್‌ ಶುಕ್ರವಾರ ಆರೋಪಿಸಿದ್ದಾರೆ.

26/11ರ ಮುಂಬೈ ಭಯೋತ್ಪಾದಕ ದಾಳಿ ವಿಚಾರವಾಗಿ ‘ಪಾಂಚಜನ್ಯ’ ಇಲ್ಲಿ ಆಯೋಜಿಸಿದ್ದ ‘26/11 ಮುಂಬೈ ಸಂಕಲ್ಪ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಿಒಕೆ ಮರು ವಶ ಪಡೆದುಕೊಳ್ಳಲು ಭಾರತ ಸೇನೆ ಸಮರ್ಥವಾಗಿದೆ. ಸರ್ಕಾರದಿಂದ ಆದೇಶ ಸಿಕ್ಕ ಕೂಡಲೇ ಸೇನೆ ಸನ್ನದ್ಧವಾಗುತ್ತದೆ’ ಎಂದು ಹೇಳಿದರು.

‘1948ರಲ್ಲಿಯೇ ಪಿಒಕೆ ವಶಕ್ಕೆ ಪಡೆಯಬಹುದಿತ್ತು. ಆದರೆ ಆಗಿನ ಸರ್ಕಾರ‌‘ಮೌಂಟ್‌ ಬ್ಯಾಟನ್‌ ಸಿಟ್ಟಾಗಬಹುದು, ಇಲ್ಲಿಗೆ ನಿಲ್ಲಿಸಿ’ ಎಂದು ಹೇಳಿತು ಎಂದು ದೂರಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.