ADVERTISEMENT

ಮುಂಬೈ-ಗೋವಾ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸೇವೆ ಶೀಘ್ರ ಆರಂಭ: ದಾನ್ವೆ

ಪಿಟಿಐ
Published 4 ಮಾರ್ಚ್ 2023, 10:44 IST
Last Updated 4 ಮಾರ್ಚ್ 2023, 10:44 IST
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು   

ಥಾಣೆ: ಮುಂಬೈ-ಗೋವಾ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್ ಸಾಹೇಬ್ ದಾನ್ವೆ ಮಹಾರಾಷ್ಟ್ರದ ಶಾಸಕರ ನಿಯೋಗಕ್ಕೆ ತಿಳಿಸಿದ್ದಾರೆ.

ಕೊಂಕಣ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸುವ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯ ನಿರಂಜನ್ ದಾವ್ಖರೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದಾನ್ವೆ ಅವರನ್ನು ಶುಕ್ರವಾರ ಶಾಸಕರ ನಿಯೋಗ ಭೇಟಿ ಮಾಡಿತು. ಸಭೆಯಲ್ಲಿ, ಕೇಂದ್ರ ಸಚಿವರು ಮುಂಬೈ ಮತ್ತು ಗೋವಾ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು ಎಂದು ದಾವ್ಖರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಪರಿಚಯಿಸಲಾದ ರೈಲು ಸೇವೆಯು ಮುಂಬೈ-ಶಿರಡಿ ಮತ್ತು ಮುಂಬೈ-ಸೋಲಾಪುರ್ ಮಾರ್ಗಗಳಲ್ಲಿ ಮುಂಬೈ ಮತ್ತು ಗೋವಾ ನಡುವೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸಲಿದೆ ಎಂದು ದಾನ್ವೆ ಹೇಳಿದರು.

ADVERTISEMENT

ಮುಂಬೈ-ಗೋವಾ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದು, ಪರಿಶೀಲನೆಯ ನಂತರ ಹೊಸ ರೈಲು ಸೇವೆಯನ್ನು ಆರಂಭಿಸಲಾಗುವುದು ಎಂದು ಸಚಿವರು ನಿಯೋಗಕ್ಕೆ ತಿಳಿಸಿದರು. ಥಾಣೆ ಮತ್ತು ಕೊಂಕಣ ಪ್ರದೇಶದ ರೈಲ್ವೆಗೆ ಸಂಬಂಧಿಸಿದ ಹಲವು ಸಮಸ್ಯೆಗಳನ್ನು ಸಚಿವರೊಂದಿಗೆ ಸಭೆಯಲ್ಲಿ ನಿಯೋಗ ಚರ್ಚಿಸಿದೆ.

ಸಾವಂತವಾಡಿ - ದಿವಾ ರೈಲು ಸೇವೆಯನ್ನು ದಾದರ್‌ವರೆಗೆ ವಿಸ್ತರಿಸುವ ಬೇಡಿಕೆ, ಸ್ಲಂ ಪುನರ್ವಸತಿ ಪ್ರಾಧಿಕಾರ (ಎಸ್‌ಆರ್‌ಎ) ಯೋಜನೆಯಡಿ ರೈಲ್ವೆ ಹಳಿಗಳ ಪಕ್ಕದಲ್ಲಿ ವಾಸಿಸುವವರಿಗೆ ಪುನರ್ವಸತಿ ಒದಗಿಸುವುದು ಮತ್ತು ಇತರ ವಿಷಯಗಳ ಕುರಿತು ನಿಯೋಗ ಚರ್ಚಿಸಿದೆ.

ಥಾಣೆಯ ಮುಂಬ್ರಾ ನಿಲ್ದಾಣವನ್ನು ಮುಂಬ್ರಾ ದೇವಿ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕೆಂದು ಶಾಸಕರು ಒತ್ತಾಯಿಸಿದರು. ಈ ಕುರಿತು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ದಾನ್ವೆ ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.