ADVERTISEMENT

ಯೋಧರಿಗೆ ನೆರವಾಗುವಂತ ಐರನ್ ಮ್ಯಾನ್ ಸೂಟ್‌ ಸಿದ್ಧಪಡಿಸಿದ ವಾರಣಾಸಿ ವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 7:12 IST
Last Updated 19 ನವೆಂಬರ್ 2019, 7:12 IST
ಐರನ್ ಮ್ಯಾನ್ ಸೂಟ್ ಸಿದ್ಧಪಡಿಸಿದ ವಾರಣಾಸಿ ವ್ಯಕ್ತಿ
ಐರನ್ ಮ್ಯಾನ್ ಸೂಟ್ ಸಿದ್ಧಪಡಿಸಿದ ವಾರಣಾಸಿ ವ್ಯಕ್ತಿ   

ವಾರಣಾಸಿ: ಶತ್ರುಗಳೊಂದಿಗಿನ ಗುಂಡಿನ ಚಕಮಕಿ ವೇಳೆ ಭಾರತೀಯ ಯೋಧರಿಗೆ ಉಪಯೋಗವಾಗಲಿ ಎನ್ನುವ ಉದ್ದೇಶದೊಂದಿಗೆ ಐರನ್ ಮ್ಯಾನ್ ಫ್ರಾಂಚೈಸಿಯಿಂದ ಸ್ಫೂರ್ತಿಗೊಂಡ ಖಾಸಗಿ ವಿಶ್ವವಿದ್ಯಾಲಯದ ಅರೆಕಾಲಿಕ ಉದ್ಯೋಗಿಯೊಬ್ಬರು ಐರನ್ ಮ್ಯಾನ್‌ ಸೂಟ್ ಅನ್ನು ಅಭಿವೃದ್ಧಿ ಪಡಿಸಿದ್ದಾರೆ.

ಅಶೋಕ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿರುವ ಶ್ಯಾಮ್ ಚೌರಾಸಿಯ, ಭಾರತೀಯ ಯೋಧರನ್ನುತಲೆಯಲ್ಲಿಟ್ಟುಕೊಂಡು ಸೂಟ್‌ನ ಮೂಲ ಮಾದರಿಯನ್ನು ಸಿದ್ಧಪಡಿಸಿದ್ದಾರೆ.

ಎಎನ್ಐ‌ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಇದೊಂದು ಲೋಹದ ಸೂಟ್ ಆಗಿದ್ದು, ಉಗ್ರರು ಅಥವಾ ಶತೃಗಳೊಂದಿಗಿನ ಗುಂಡಿನ ಚಕಮಕಿ ಸಮಯದಲ್ಲಿ ಭಾರತೀಯಯೋಧರಿಗೆನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದೊಂದು ಮಾದರಿಯಷ್ಟೆ, ಆದರೆ ಇದು ಹೋರಾಟದ ವೇಳೆಯಲ್ಲಿ ಸೈನಿಕರಿಗೆ ನೆರವಾಗುತ್ತದೆ ಎಂದು ತಿಳಿಸಿದ್ದಾರೆ.

ADVERTISEMENT

ಇದರಲ್ಲಿ ಗೇರ್ ಮತ್ತು ಮೋಟರ್‌ಗಳನ್ನು ಬಳಸಿದ್ದೇವೆ. ಮೊಬೈಲ್ ಸಂಪರ್ಕವನ್ನು ಹೊಂದಿದ್ದು, ದೂರದಿಂದಲೇ ಬಳಸಬಹುದಾಗಿದೆ. ಇದು ಸಂವೇದಕ(ಸೆನ್ಸಾರ್‌)ಗಳನ್ನು ಹೊಂದಿದ್ದು, ಹಿಂಭಾಗದಿಂದ ಯೋಧರ ಮೇಲೆ ಆಗುವ ಆಕ್ರಮಣಗಳನ್ನು ಗ್ರಹಿಸಲು ಸಹಾಯ ಮಾಡುತ್ತದೆ. ತವರದಿಂದ ಈ ಸೂಟ್‌ ಅನ್ನು ಸಿದ್ಧಪಡಿಸಲಾಗಿದ್ದು, ಇದೀಗ ಇದೇ ಮಾದರಿಯ ಮೇಲೆ ಕೆಲಸ ಮಾಡಲು ಶ್ಯಾಮ್ ಹಣಕಾಸಿನ ನೆರವಿಗೆ ಎದುರು ನೋಡುತ್ತಿದ್ದಾರೆ.

ದೇಶದ ಶತ್ರುಗಳ ಪ್ರತಿರೋಧಕವಾಗಿ ಸೂಟ್ ಕೆಲಸ ಮಾಡುತ್ತದೆ ಮತ್ತು ಯೋಧರಮನೋಸ್ಥೈರ್ಯವನ್ನು ಹೆಚ್ಚಿಸುವ ಮೂಲಕ ಅವರ ಪ್ರಾಣ ರಕ್ಷಕವಾಗಿಯೂ ಬಳಕೆಯಾಗುತ್ತದೆ.

ಈ ಸೂಟ್ ಕುರಿತು ಗಮನ ಹರಿಸುವಂತೆ ಮತ್ತುಯೋಧರಿಗೆಸಹಾಯ ಮಾಡಲು ಈ ಮಾದರಿಯನ್ನು ನಿರ್ಮಿಸಲು ಸರ್ಕಾರಿ ಸಂಸ್ಥೆಗಳಾದ ಡಿಆರ್‌ಡಿಒಗೆ ಈ ಮೂಲಕ ಒತ್ತಾಯಿಸುತ್ತೇನೆ. ಪಾಕಿಸ್ತಾನ ಸೇರಿದಂತೆ ಇತರೆ ದೇಶಗಳು ಈ ಮಾದರಿಯ ಬಗ್ಗೆ ಕೆಲಸ ಮಾಡುತ್ತಿವೆ. ಯೋಧರ ಜೀವಕ್ಕೆ ಜಾಸ್ತಿ ಬೆಲೆಯಿದೆ. ಈಗ ನಾನೇನು ಮಾಡಿದ್ದೇನೆ ಅದು ಕೇವಲ ಡಿಆರ್‌ಡಿಒ ಮತ್ತು ಇತರೆ ಸಂಸ್ಥೆಗಳ ಗಮನ ಸೆಳೆಯುವ ಪ್ರಯತ್ನವಷ್ಟೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.