ADVERTISEMENT

ವರುಣ್‌ ಗಾಂಧಿ ಕಾಂಗ್ರೆಸ್‌ ಸೇರ್ಪಡೆಯಾದರೆ ಸಂತೋಷ: ಅಧೀರ್‌ ರಂಜನ್‌ ಚೌಧರಿ

ಪಿಟಿಐ
Published 26 ಮಾರ್ಚ್ 2024, 10:43 IST
Last Updated 26 ಮಾರ್ಚ್ 2024, 10:43 IST
   

ಬಾರಾಂಪುರ: ಗಾಂಧಿ ಕುಟುಂಬದೊಂದಿಗೆ ಸಂಪರ್ಕ ಹೊಂದಿದ್ದಾರೆಂಬ ಕಾರಣಕ್ಕೆ ವರುಣ್‌ ಗಾಂಧಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಅಧೀರ್‌ ರಂಜನ್ ಚೌಧರಿ ಆರೋಪಿಸಿದ್ದಾರೆ.

‘ವರುಣ್‌ ಗಾಂಧಿ ಒಬ್ಬ ಪ್ರಬಲ ನಾಯಕ. ವಿದ್ಯಾವಂತ ಕೂಡ. ರಾಜಕೀಯದಲ್ಲಿ ಕ್ಲೀನ್‌ ಇಮೇಜ್ ಹೊಂದಿದ್ದಾರೆ. ಅಂತಹ ನಾಯಕನಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದೆ. ಗಾಂಧಿ ಕುಟುಂಬದೊಂದಿಗೆ ವರುಣ್ ಅವರು ಸಂಪರ್ಕ ಹೊಂದಿದ್ದಾರೆಂಬ ಕಾರಣಕ್ಕೆ ಟಿಕೆಟ್ ನೀಡಲಿಲ್ಲ. ವರುಣ್‌ ಗಾಂಧಿ ಕಾಂಗ್ರೆಸ್ ಸೇರ್ಪಡೆಯಾದರೆ ನಮಗೆ ಸಂತೋಷ’ ಎಂದರು.

ವರುಣ್‌ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹೋದರ ಸಂಬಂಧಿಗಳಾಗಿದ್ದಾರೆ. ಉತ್ತರ ಪ್ರದೇಶದ ಪಿಲಿಭಿತ್ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿರುವ ವರುಣ್ ಗಾಂಧಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆಡಳಿತ ವೈಖರಿಯ ಬಗ್ಗೆ ಆಗಾಗ್ಗೆ ಅಸಮಾಧಾನ ಹೊರಹಾಕುತ್ತಿದ್ದರು. ಈ ಬಾರಿ ಪಿಲಿಭಿತ್‌ನಿಂದ ಮಾಜಿ ಕಾಂಗ್ರೆಸ್ ಸದಸ್ಯ ಜಿತಿನ್ ಪ್ರಸಾದ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ADVERTISEMENT

ವರುಣ್‌ ಗಾಂಧಿ ಅವರ ತಾಯಿ ಮೇನಕಾ ಗಾಂಧಿ ಅವರಿಗೆ ಮತ್ತೆ ಬಿಜೆಪಿ ಟಿಕೆಟ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.