ADVERTISEMENT

ಪತ್ರಕರ್ತ ವಿನೋದ್‌ ದುವಾ ಸ್ಥಿತಿ ಗಂಭೀರ

ಪಿಟಿಐ
Published 29 ನವೆಂಬರ್ 2021, 14:39 IST
Last Updated 29 ನವೆಂಬರ್ 2021, 14:39 IST
ವಿನೋದ್‌ ದುವಾ
ವಿನೋದ್‌ ದುವಾ   

ನವದೆಹಲಿ: ಕೋವಿಡ್‌ ಬಾಧಿಸಿ ಆಸ್ಪತ್ರೆಗೆ ದಾಖಲಾಗಿರುವ ಹಿರಿಯ ಪತ್ರಕರ್ತ ವಿನೋದ್‌ ದುವಾ ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪುತ್ರಿ ನಟಿ ಮಲ್ಲಿಕಾ ದುವಾ ಸೋಮವಾರ ತಿಳಿಸಿದ್ದಾರೆ.

ದೂರದರ್ಶನ ಮತ್ತು ಎನ್‌ಡಿಟಿವಿಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿರುವ ದುವಾ (67) ಅವರನ್ನು ಕೋವಿಡ್‌ ಬಾಧಿಸಿದ ಕಾರಣ ಈ ವರ್ಷದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಪತ್ನಿ ಡಾ. ಪದ್ಮಾವತಿ ಅವರು ಜೂನ್‌ನಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT