ADVERTISEMENT

ವಿಡಿಯೊ: ಪೊಲೀಸ್‌ ಠಾಣೆಯೊಳಗೆ ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಯುವಕರಿಂದ ಹಲ್ಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಆಗಸ್ಟ್ 2022, 7:48 IST
Last Updated 7 ಆಗಸ್ಟ್ 2022, 7:48 IST
ಹಲ್ಲೆಯ ಚಿತ್ರ
ಹಲ್ಲೆಯ ಚಿತ್ರ   

ನವದೆಹಲಿ: ಇಲ್ಲಿನ ಆನಂದ್‌ ವಿಹಾರ್‌ ಪೊಲೀಸ್ ಠಾಣೆಯ ಒಳಗೆಹೆಡ್‌ ಕಾನ್‌ಸ್ಟೆಬಲ್‌ ಅಪರಿಚಿತರ ಗುಂಪು ಹಲ್ಲೆ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಈ ಘಟನೆ ಆಗಸ್ಟ್‌ 3ರಂದು ನಡೆದಿದೆ. 10–12 ಜನರಿದ್ದ ಗುಂಪಿನಲ್ಲಿ ಯುವಕನೊಬ್ಬಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಠಾಣೆಯಲ್ಲಿ ಇದ್ದವರು ಯಾರೂ ಕೂಡ ಸಹಾಯಕ್ಕೆ ಬಂದಿಲ್ಲ, ಅವರು ತಮ್ಮ ಮೊಬೈಲ್‌ ಫೋನ್‌ನಲ್ಲಿ ಹಲ್ಲೆ ಮಾಡುವುದನ್ನು ವಿಡಿಯೊ ಮಾಡುತ್ತಿದ್ದರು.

ಇದೇ ಠಾಣೆಯ ಕಾನ್‌ಸ್ಟೆಬಲ್‌ವೊಬ್ಬರು ವಿಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ. ಹಲವು ಸಲಹೆಡ್‌ ಕಾನ್‌ಸ್ಟೆಬಲ್‌ ಕ್ಷಮೆ ಕೇಳಿದರೂ ಯುವಕರು ಥಳಿಸುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.

ADVERTISEMENT

ಹೆಡ್‌ ಕಾನ್‌ಸ್ಟೆಬಲ್‌ ಮೇಲೆ ಯಾಕೆ ಹಲ್ಲೆ ಮಾಡಲಾಯಿತು ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಈ ಘಟನೆ ಬಗ್ಗೆ ಹಿರಿಯ ಪೊಲೀಸ್‌ ಅಧಿಕಾರಿಗಳು ತನಿಖೆಗೆ ಆದೇಶ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.