ADVERTISEMENT

VIDEO| ಕೊರೊನಾ ವೈರಸ್‌ನಿಂದ ಹಾನಿಗೀಡಾಗುವ ಶ್ವಾಸಕೋಶ ಹೇಗಿರುತ್ತದೆ ಗೊತ್ತೆ? 

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 6:41 IST
Last Updated 28 ಮಾರ್ಚ್ 2020, 6:41 IST
   

ಇಷ್ಟು ದಿನ ಕೊರೊನಾ ವೈರಸ್‌ ಹೇಗಿರುತ್ತದೆ, ಅದು ಸೂಕ್ಷ್ಮ ದರ್ಶಕದಲ್ಲಿ ಹೇಗೆ ಕಾಣುತ್ತದೆ ಎಂಬುದನ್ನಷ್ಟೇ ಜಗತ್ತು ನೋಡಿದೆ. ಆದರೆ, ಅದು ಶ್ವಾಸಕೋಶದ ಮೇಲೆ ಮಾಡುವ ದಾಳಿ, ಅದರಿಂದ ಶ್ವಾಸಕೋಶಕ್ಕೆ ಉಂಟಾಗುವ ಹಾನಿಯ ಕುರಿತ ವಿಡಿಯೊವೊಂದು ಈಗ ಬಿಡುಗಡೆಯಾಗಿದೆ.

ಸರ್ಜಿಕಲ್‌ ಥಿಯೇಟರ್‌ ಟೆಕ್ನಾಲಜಿ ನೆರವಿನೊಂದಿಗೆ ಕೊರೊನಾ ವೈರಸ್‌ ರೋಗಿಯ ಶ್ವಾಸಕೋಶದ ವಿಡಿಯೊವನ್ನು 'ವಾಷಿಂಗ್ಟನ್‌ ಯೂನಿವರ್ಸಿಟಿ ಆಫ್‌ ಹಾಸ್ಪಿಟಲ್‌'ನ ವೈದ್ಯೆ ಡಾ. ಕೈತ್‌ ಮೋರ್ಟ್‌ಮನ್‌ ಅವರು ಸಿದ್ಧಪಡಿಸಿದ್ದಾರೆ. ಈ 360 ಡಿಗ್ರಿ ವಿಡಿಯೋದಲ್ಲಿ ಕೊರೊನಾ ವೈರಸ್‌ನಿಂದ ಶ್ವಾಸಕೋಶಕ್ಕೆ ಆಗುವ ಹಾನಿಯನ್ನು ತೋರಿಸಲಾಗಿದೆ.

ಕೊರೊನಾ ವೈರಸ್‌ ದಾಳಿ ಮಾಡಿದರೆ, ಯಾವುದೇ ವ್ಯಕ್ತಿಯ ಶ್ವಾಸಕೋಶವೂ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಡಾ. ಕೈತ್‌ ಹೇಳಿದ್ದಾರೆ. 59 ವರ್ಷ ಪ್ರಾಯದ, ಅತಿ ರಕ್ತದೊತ್ತಡವುಳ್ಳ ವ್ಯಕ್ತಿಯೊಬ್ಬರ ಶ್ವಾಸಕೋಶಕ್ಕೆ ಕೊರೊನಾ ವೈರಸ್‌ ಮಾಡಿದ್ದ ಹಾನಿಯನ್ನೇ ತಾವು 3ಡಿ ವಿಡಿಯೊ ಮೂಲಕ ವಿವರಿಸಿರುವುದಾಗಿ ಅವರು ಹೇಳಿದ್ದಾರೆ. ಈ ಕುರಿತು ‘ಸಿಎನ್‌ಎನ್‌ ಹೆಲ್ತ್‌’ ವರದಿ ಮಾಡಿದೆ.

ADVERTISEMENT

‘ಕೊರೊನಾ ವೈರಸ್‌ ರೋಗಿಗಳಿಗೆ ವೆಂಟಿಲೇಟರ್‌ಗಳ ಅಗತ್ಯವಿರುತ್ತದೆ. ಒಂದೊಂದು ಬಾರಿ ಅದೂ ಕೂಡ ಸಾಲದೇ ಹೋಗಬಹುದು. ರಕ್ತಕ್ಕೆ ಆಮ್ಲಜನಕ ಒದಗಿಸುವ ವೈದ್ಯಕೀಯ ಯಂತ್ರಗಳು ಅಗತ್ಯವಾಗುತ್ತವೆ’ ಎಂದು ಅವರು ವಿವ‌ರಿಸಿದ್ದಾರೆ.

ವಿಡಿಯೊ ನೋಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.