ADVERTISEMENT

ಮುಳುಗುತ್ತಿದ್ದ ದೋಣಿಯಿಂದ ಹತಾಶರಾಗಿ ನೀರಿಗೆ ಹಾರಿದ ಪ್ರಯಾಣಿಕರು: ವಿಡಿಯೊ ವೈರಲ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಸೆಪ್ಟೆಂಬರ್ 2021, 12:16 IST
Last Updated 9 ಸೆಪ್ಟೆಂಬರ್ 2021, 12:16 IST
ದೋಣಿ ಮುಳುಗುತ್ತಿರುವ ಸನ್ನಿವೇಶ
ದೋಣಿ ಮುಳುಗುತ್ತಿರುವ ಸನ್ನಿವೇಶ    

ಜೊರ್ಹಾತ್‌: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಬುಧವಾರ ಸುಮಾರು 100 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಡಿಕ್ಕಿ ಹೊಡೆದು ಸಂಭವಿಸಿದ ಅನಾಹುತದಲ್ಲಿ ಒಬ್ಬರು ಮೃತಪಟ್ಟು, ಇಬ್ಬರು ನಾಪತ್ತೆಯಾಗಿದ್ದಾರೆ. ಉಳಿದವರನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಸಫಲವಾಗಿದೆ.

ಡಿಕ್ಕಿ ಸಂಭವಿಸಿ ದೋಣಿ ಮುಳುಗುತ್ತಿರುವಾಗ ಜನ ಆತಂಕದಿಂದ, ಚೀರಾಡುತ್ತಾ ನದಿಗೆ ಹಾರಿರುವ ವಿಡಿಯೊಗಳು ಸದ್ಯ ಸಾಮಾಜಿಕ ಜಾಲತಾಣವನ್ನು ತಲ್ಲಣಗೊಳಿಸಿದೆ.

ಬಿರುಕು ಬಿಟ್ಟು ಒಡೆದುಹೋಗುವ ದೋಣಿ ನೀರಿನಲ್ಲಿ ಮುಳುಗುವುದು, ಪ್ರಯಾಣಿಕರು ಕಿರುಚುತ್ತಾ ಅತ್ತಿಂದಿತ್ತ, ಇತ್ತಿಂದತ್ತ ಓಡಾಡುವುದು, ಮುಳುಗುತ್ತಿರುವ ದೋಣಿಯಿಂದ ಜಿಗಿಯುವುದು ದೃಶ್ಯದಲ್ಲಿದೆ.

ADVERTISEMENT

ಜೋರ್ಹಾಟ್‌ನ ನಿಮತಿ ಘಾಟ್‌ನಲ್ಲಿ ಬುಧವಾರ ಸಂಭವಿಸಿದದುರ್ಘಟನೆಯಲ್ಲಿ 23 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.