ADVERTISEMENT

ವಿಶಾಖಪಟ್ಟಣ ಬೇಹುಗಾರಿಕೆ ಪ್ರಕರಣ: ಎನ್‌ಐಎಯಿಂದ ಮುಖ್ಯ ಸಂಚುಕೋರ ಬಂಧನ

ಪಿಟಿಐ
Published 15 ಮೇ 2020, 20:00 IST
Last Updated 15 ಮೇ 2020, 20:00 IST
ಎನ್‌ಐಎ
ಎನ್‌ಐಎ   

ನವದೆಹಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗೆ ರಹಸ್ಯ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದಡಿ ವಿಶಾಖಪಟ್ಟಣ ಬೇಹುಗಾರಿಕೆ ಪ್ರಕರಣದ ಮುಖ್ಯ ಸಂಚುಕೋರನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಶುಕ್ರವಾರ ಬಂಧಿಸಿದೆ.

ಮುಂಬೈ ನಿವಾಸಿ 49 ವರ್ಷದ ಮೊಹಮ್ಮದ್‌ ಹರೂನ್‌ ಹಜಿ ಅಬ್ದುಲ್‌ ರೆಹಮಾನ್ ಲಾಕಡವಾಲಾ ‌ಬಂಧಿತ ವ್ಯಕ್ತಿ.

‘ತನಿಖೆ ಸಂದರ್ಭದಲ್ಲಿ ಲಾಕಡವಾಲಾ ಉದ್ಯಮಿಯಂತೆ ನಟಿಸಿ ಪಾಕಿಸ್ತಾನದ ಕರಾಚಿಗೆ ಹಲವು ಬಾರಿ ಭೇಟಿ ನೀಡಿರುವುದು ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಗೂಢಾಚಾರರಾದ ಅಕ್ಬರ್‌ ಅಲಿಯಾಸ್‌ ಅಲಿ ಮತ್ತು ರಿಜ್ವಾನ್‌ ಜೊತೆ ಸಂಪರ್ಕಕ್ಕೆ ಬಂದಿರುವುದು ಖಚಿತವಾಗಿದೆ. ಈ ವೇಳೆ ನೌಕಾಪಡೆ ಸಿಬ್ಬಂದಿಯ ಬ್ಯಾಂಕ್‌ ಖಾತೆಗಳಿಗೆ ಹಣ ಜಮೆ ಮಾಡಲು ಗೂಢಾಚಾರರು ಸೂಚಿಸಿದ್ದಾರೆ’ ಎಂದು ಅಧಿಕಾರಿರೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.