ADVERTISEMENT

ದೆಹಲಿ– ಪ್ಯಾರಿಸ್‌ ನಡುವೆ ನಾನ್‌ಸ್ಟಾಪ್ ವಿಮಾನ ಸೇವೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2021, 7:10 IST
Last Updated 8 ನವೆಂಬರ್ 2021, 7:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ವಿಸ್ತಾರ ವಿಮಾನಯಾನ ಸಂಸ್ಥೆಯು ದೆಹಲಿ– ಪ್ಯಾರಿಸ್‌ ನಡುವೆ ನಿಲುಗಡೆರಹಿತ ವಿಮಾನಯಾನ ಸೇವೆಯನ್ನು ಪ್ರಾರಂಭಿಸಿದೆ.

ಸಂಸ್ಥೆಯು ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಯಾರಿಸ್‌ನಚಾರ್ಲ್ಸ್ ಡಿ ಗೌಲ್ ವಿಮಾನ ನಿಲ್ದಾಣಕ್ಕೆ ಭಾನುವಾರ ಮೊದಲ ವಿಮಾನಯಾನ ಸಂಚಾರವನ್ನು ಆರಂಭಿಸಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ವಾರದಲ್ಲಿ ಎರಡು ದಿನ ಅಂದರೆ ಬುಧವಾರ ಮತ್ತು ಭಾನುವಾರ ವಿಸ್ತಾರ ವಿಮಾನ ಹಾರಾಟ ಸೇವೆಯನ್ನು ಒದಗಿಸಲಿದೆ.

ADVERTISEMENT

ಪ್ಯಾರಿಸ್‌ ಹೊರತುಪಡಿಸಿ ಲಂಡನ್‌, ಫ್ರಾಂಕ್‌ಫರ್ಟ್‌, ದುಬೈ, ದೋಹಾ ಶಾರ್ಜಾ ಮತ್ತು ಮಾಲೆ ಇತರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಾಗಿವೆ.

‘ಪ್ಯಾರಿಸ್‌ಗೆ ಅತ್ಯುತ್ತಮ ವಿಮಾನ ಸೇವೆ ಒದಗಿಸುವ ಮೂಲಕ ಜಾಗತಿಕವಾಗಿ ನಮ್ಮ ಹೆಜ್ಜೆಯನ್ನು ವಿಸ್ತರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗಿದೆ’ ಎಂದು ವಿಸ್ತಾರ ಕಾರ್ಯನಿರ್ವಾಹಕ ಕಚೇರಿ ಮುಖ್ಯಸ್ಥ ಲೆಸ್ಲಿ ಥಂಗ್‌ ಹೇಳಿದರು.

‘ಭಾರತ ಮತ್ತು ಫ್ರಾನ್ಸ್‌ ನಡುವೆ ಬಲವಾದ ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಹೊಂದಲು ನೇರವಾದ ಸಂಪರ್ಕಕ್ಕೆ ಹೆಚ್ಚಿನ ಬೇಡಿಕೆಯಿದೆ. ಅಲ್ಲದೆ ಪ್ಯಾರಿಸ್‌ ನಮ್ಮ ಸಂಪರ್ಕಕ್ಕೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.