
ನವದೆಹಲಿ: ಇಥಿಯೋಪಿಯಾದಲ್ಲಿ ಹೊರಹೊಮ್ಮಿದ ಜ್ವಾಲಾಮುಖಿಯಿಂದ ಉಂಟಾಗಿರುವ ದಟ್ಟ ಹೊಗೆಯು ಭಾರತದ ವಿಮಾನಗಳ ಸಂಚಾರಕ್ಕೆ ಸಮಸ್ಯೆ ಉಂಟು ಮಾಡಬಹುದು. ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳು ಎಚ್ಚರಿಕೆ ವಹಿಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೋಮವಾರ ಎಚ್ಚರಿಕೆ ನೀಡಿದೆ.
ಭಾನುವಾರ ಹೊರಹೊಮ್ಮಿರುವ ‘ಹೈಲಿಗುಬ್ಬಿ’ ಜ್ವಾಲಾಮುಖಿಯ ಹೊಗೆಯು ಮೋಡದ ರೀತಿಯಲ್ಲಿ ಭಾರತದ ಪಶ್ಚಿಮ ಭಾಗಕ್ಕೆ ಹಾರಿ ಬಂದಿದ್ದು ವೈಮಾನಿಕ ಕಾರ್ಯಾಚರಣೆ ಮೇಲೆ ಪರಿಣಾಮ ಬೀರಲಿದೆ ಎಂದು ಡಿಜಿಸಿಎ ಹೇಳಿದೆ.
ಕೆಲವು ವಿಮಾನಗಳನ್ನು ರದ್ದುಗೊಳಿಸಿದ್ದಾಗಿ ಆಕಾಶ್ ಏರ್‌ಲೈನ್ಸ್, ಇಂಡಿಗೊ, ಕೆಎಲ್‌ಎಂ ವಿಮಾನಯಾನ ಸಂಸ್ಥೆಗಳು ಹೇಳಿವೆ. ಅಫಾರ್ ಪ್ರದೇಶದಲ್ಲಿ ‘ಹೈಲಿಗುಬ್ಬಿ’ ಜ್ವಾಲಾಮುಖಿಯು 12,000 ವರ್ಷದ ನಂತರ ಹೊರಹೊಮ್ಮಿದೆ ಎಂದು ತಜ್ಞರು ಹೇಳಿದ್ದಾರೆ. ದಟ್ಟ ಹೊಗೆ ಮಾದರಿಯ ಧೂಳು ಸುಮಾರು 14 ಕಿಲೋ ಮೀಟರ್ ಎತ್ತರಕ್ಕೆ ವ್ಯಾಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.