ADVERTISEMENT

13 ಸಾವಿರ ಜನರಿಗೆ ಕೋವ್ಯಾಕ್ಸಿನ್‌ ಎರಡನೇ ಡೋಸ್‌

ಪಿಟಿಐ
Published 22 ಜನವರಿ 2021, 12:39 IST
Last Updated 22 ಜನವರಿ 2021, 12:39 IST
ಮಹಿಳೆಯೊಬ್ಬರಿಗೆ ಲಸಿಕೆ ಚುಚ್ಚುಮದ್ದು ನೀಡುತ್ತಿರುವುದು (ಎಎಫ್‌ಪಿ)
ಮಹಿಳೆಯೊಬ್ಬರಿಗೆ ಲಸಿಕೆ ಚುಚ್ಚುಮದ್ದು ನೀಡುತ್ತಿರುವುದು (ಎಎಫ್‌ಪಿ)   

ಹೈದರಾಬಾದ್‌: ಮೂರನೇ ಹಂತದ ಕ್ಲಿನಿಕಲ್‌ ಪ್ರಯೋಗದಡಿ 13 ಸಾವಿರ ಸ್ವಯಂಸೇವಕರಿಗೆ ಕೋವಿಡ್‌–19 ಲಸಿಕೆಯಾದ ಕೋವ್ಯಾಕ್ಸಿನ್‌ನ ಎರಡನೇ ಡೋಸ್‌ ಅನ್ನು ಯಶಸ್ವಿಯಾಗಿ ನೀಡಲಾಗಿದೆ ಎಂದುಭಾರತ್‌ ಬಯೋಟೆಕ್‌ ಕಂಪನಿಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಚಿತ್ರಾ ಎಲ್ಲ ಅವರು ಶುಕ್ರವಾರ ತಿಳಿಸಿದರು.

ಕೋವ್ಯಾಕ್ಸಿನ್‌ ಮೂರನೇ ಹಂತದ ಪ್ರಯೋಗಕ್ಕೆ 25,800 ಸ್ವಯಂ ಸೇವಕರು ನೋಂದಣಿಯಾಗಿದ್ದಾರೆ ಎಂದು ಭಾರತ್‌ ಬಯೋಟೆಕ್‌ ಈ ಹಿಂದೆ ತಿಳಿಸಿತ್ತು. ತುರ್ತು ಪರಿಸ್ಥಿತಿಯಲ್ಲಿ ಕೋವ್ಯಾಕ್ಸಿನ್‌ ಮಾರಾಟ ಮತ್ತು ವಿತರಣೆಗೆ ಅನುಮತಿ ನೀಡಲಾಗಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಹಾಗೂ ರಾಷ್ಟ್ರೀಯ ರೋಗಸೂಕ್ಷ್ಮಾಣು ಅಧ್ಯಯನ ಸಂಸ್ಥೆ(ಎನ್‌ಐವಿ) ಸಹಯೋಗದಲ್ಲಿ ಸ್ವದೇಶಿಯಾಗಿ ಕೋವ್ಯಾಕ್ಸಿನ್‌ ಅಭಿವೃದ್ಧಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT