
ಪಿಟಿಐಮತದಾರರ ಪಟ್ಟಿ
– ಎ.ಐ ಚಿತ್ರ
ಹೈದರಾಬಾದ್: ಸಾಮಾಜಿಕ ಜಾಲತಾಣದ ಮೂಲಕ ತಿದ್ದುಪಡಿ ಮಾಡಿದ, ತಪ್ಪಾದ ಮತದಾರರ ಪಟ್ಟಿಯನ್ನು ಹಂಚಿಕೊಂಡವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ತಿದ್ದುಪಡಿ ಮಾಡಿದ ವಿಳಾಸ, ಭಾವಚಿತ್ರ ಮತ್ತು ಎಪಿಕ್ ಕಾರ್ಡ್‌ನೊಂದಿಗೆ ಕೆಲವು ಸಿನೆಮಾ ತಾರೆಯರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ, ಸುಳ್ಳು ಮತದಾರರ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ, ಜ್ಯುಬಿಲಿ ಹಿಲ್ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿ ಮಧುರಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಿಆರ್‌ಎಸ್ ಎಂಎಲ್‌ಎ ಮಗಂತಿ ಗೋಪಿನಾಥ್ ನಿಧನದ ಕಾರಣದಿಂದ ಜ್ಯುಬಿಲಿ ಹಿಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನವೆಂಬರ್ 11ರಂದು ಹಾಗೂ ಮತ ಎಣಿಕೆ ನ.14ರಂದು ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.