ನವದೆಹಲಿ: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) 2024–25ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆ ಮುಗಿದಿದ್ದು, ಶೇ 70ರಷ್ಟು ಮತದಾನವಾಗಿದೆ.
ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣಾ ಸಮಿತಿ ಪ್ರಕಾರ ಶೇ 69.6ರಷ್ಟು ವಿದ್ಯಾರ್ಥಿಗಳು ಹಕ್ಕು ಚಲಾಯಿಸಿದರು. 2023ರಲ್ಲಿ ಶೇ 73ರಷ್ಟು ಮತದಾನವಾಗಿತ್ತು.
7,906 ವಿದ್ಯಾರ್ಥಿಗಳಲ್ಲಿ 5,500 ವಿದ್ಯಾರ್ಥಿಗಳು ಮತದಾನಕ್ಕೆ ಅರ್ಹರಾಗಿದ್ದರು. ಒಟ್ಟು 42 ಕೌನ್ಸೆಲರ್ ಸ್ಥಾನಗಳಿಗೆ 200 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮತಎಣಿಕೆ ಪ್ರಕ್ರಿಯೆಯು ಶುಕ್ರವಾರ ರಾತ್ರಿ ಆರಂಭವಾಗಿದೆ. ಕೌನ್ಸೆಲರ್‌ಗಳ ಸ್ಥಾನದ ಫಲಿತಾಂಶ ಮೊದಲಿಗೆ ಪ್ರಕಟವಾಗಲಿದೆ. ಅಂತಿಮ ಫಲಿತಾಂಶ ಸೋಮವಾರ, ಏ. 28ರಂದು ಹೊರಬೀಳುವ ಸಂಭವವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.