ADVERTISEMENT

ವಕ್ಫ್ ಕಾಯ್ದೆ ಆಸ್ತಿಗಳ ಪಾರದರ್ಶಕ, ಜವಾಬ್ದಾರಿಯುತ ನಿರ್ವಹಣೆಗೆ ಸಹಾಯಕ: CM ಯಾದವ್

ಪಿಟಿಐ
Published 6 ಏಪ್ರಿಲ್ 2025, 8:16 IST
Last Updated 6 ಏಪ್ರಿಲ್ 2025, 8:16 IST
<div class="paragraphs"><p>ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌</p></div>

ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌

   

ಪಿಟಿಐ ಚಿತ್ರ

ಭೋಪಾಲ್: ವಕ್ಫ್‌ (ತಿದ್ದುಪಡಿ) ಕಾಯ್ದೆಯು ವಕ್ಫ್‌ ಆಸ್ತಿಗಳ ಪಾರದರ್ಶಕ, ಸಮಾನ ಮತ್ತು ಜವಾಬ್ದಾರಿಯುತ ನಿರ್ವಹಣೆಯನ್ನು ಖಚಿತಪಡಿಸುತ್ತದೆ. ಜೊತೆಗೆ ಅದರ ಪ್ರಯೋಜನಗಳನ್ನು ಮುಸ್ಲಿಂ ಸಮುದಾಯದ ಬಡವರು, ನಿರ್ಗತಿಕರು ಮತ್ತು ವಂಚಿತರಿಗೆ ತಲುಪಿಸುತ್ತದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್‌ ಯಾದವ್‌ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಕ್ಫ್‌ ಕಾಯ್ದೆಯು ವಕ್ಫ್ ಆಸ್ತಿಗಳ ಪಾರದರ್ಶಕ, ಸಮಾನ ಮತ್ತು ಜವಾಬ್ದಾರಿಯುತ ನಿರ್ವಹಣೆಯನ್ನು ಖಚಿತಪಡಿಸುತ್ತದೆ ಮತ್ತು ಅದರ ಪ್ರಯೋಜನಗಳನ್ನು ಮುಸ್ಲಿಂ ಸಮುದಾಯದ ನಿರ್ಗತಿಕರು, ಬಡವರು ಮತ್ತು ವಂಚಿತರಿಗೆ ತಲುಪಿಸುತ್ತದೆ. ಇದರಿಂದಾಗಿ ಅವರ ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗಾವಕಾಶಗಳಿಗೆ ಹೊಸ ಹಾದಿ ಸುಗಮವಾಗುತ್ತದೆ’ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ನ್ಯಾಯ ಮತ್ತು ಸಬಲೀಕರಣದ ಮೂಲ ಮಂತ್ರದೊಂದಿಗೆ ಪ್ರತಿಯೊಂದು ವರ್ಗ ಮತ್ತು ಸಮುದಾಯದ ಉನ್ನತಿಗೆ ಬದ್ಧವಾಗಿದೆ ಎಂದು ಯಾದವ್ ತಿಳಿಸಿದ್ದಾರೆ.

ವಕ್ಫ್‌ ತಿದ್ದುಪಡಿ ಮಸೂದೆಯನ್ನು ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಅವರನ್ನು ಯಾದವ್‌ ಅಭಿನಂದಿಸಿದ್ದಾರೆ.

ವಾರದ ಆರಂಭದಲ್ಲಿ ಸಂಸತ್ತು ಅಂಗೀಕರಿಸಿದ ವಕ್ಫ್‌ (ತಿದ್ದುಪಡಿ) ಮಸೂದೆ 2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಅಂಕಿತ ಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.