ADVERTISEMENT

ದೆಹಲಿಯಲ್ಲಿ ಅಪಾಯದ ಮಟ್ಟ ತಲುಪಿದ ಯಮುನಾ ನದಿ

ಪಿಟಿಐ
Published 24 ಆಗಸ್ಟ್ 2020, 11:48 IST
Last Updated 24 ಆಗಸ್ಟ್ 2020, 11:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಯುಮುನಾ ನದಿಯಲ್ಲಿನ ನೀರಿನ ಪ್ರಮಾಣ ಸೋಮವಾರ ಅಪಾಯದ ಮಟ್ಟ ಅಂದರೆ 204.38 ಮೀಟರ್ ಗೆ ತಲುಪಿದೆ. ಪ್ರವಾಹ ಪರಿಸ್ಥಿತಿಯೂ ಸೇರಿದಂತೆ ಯಾವುದೇ ಪರಿಣಾಮಗಳನ್ನು ಎದುರಿಸಲು ಸರ್ಕಾರ ಸಜ್ಜಾಗಿದೆ ಎಂದು ದೆಹಲಿಯ ಜಲ ಸಚಿವ ಸತ್ಯೇಂದರ್ ಜೈನ್ ಅವರು ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ಹರಿಯಾಣದ ಯಮುನಾನಗರ ಜಿಲ್ಲೆಯ ಹತಿನಿಕುಂದ್ ಬ್ಯಾರೇಜ್ ನಿಂದ ಸೋಮವಾರ ಒಟ್ಟು 5,883 ಕ್ಯುಸೆಕ್ ನೀರು ಹರಿಸಲಾಗಿರುವುದು ನೀರಿನ ಮಟ್ಟ ಏರಿಕೆಗೆ ಕಾರಣ.ನದಿಯ ನೀರಿನ ಗರಿಷ್ಠ ಮಟ್ಟ 205.33 ಮೀಟರ್ ಇದ್ದು, ಸೋಮವಾರ ಬೆಳಿಗ್ಗೆ 204.38 ಮೀಟರ್ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT