ADVERTISEMENT

ನೀರು ಕಳವು: ಪೊಲೀಸರಿಗೆ ದೂರು!

ಪಿಟಿಐ
Published 13 ಮೇ 2019, 18:34 IST
Last Updated 13 ಮೇ 2019, 18:34 IST

ನಾಸಿಕ್‌: ಮನೆಯತಾರಸಿ ಮೇಲೆ ಸಂಗ್ರಹಿಸಿಟ್ಟಿದ್ದ 500 ಲೀಟರ್‌ ನೀರನ್ನು ಕದಿಯಲಾಗಿದೆಎಂದು ಇಲ್ಲಿನ ಶ್ರವಸ್ತಿ ನಗರದ ನಿವಾಸಿ ವಿಲಾಸ್‌ ಅಹಿರ್‌ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಗ್ರಹಿಸಿಟ್ಟದ್ದ 500 ಲೀಟರ್‌ನಲ್ಲಿ 300 ಲೀಟರ್‌ನಷ್ಟು ನೀರನ್ನು ಕದಿಯಲಾಗಿದೆ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ತನಿಖೆ ಪ್ರಗತಿಯಲ್ಲಿದೆ. ಕಳೆದ ವರ್ಷ ಮಳೆ ಪ್ರಮಾಣ ಕಡಿಮೆ ಆಗಿದ್ದರಿಂದ ವಾಗ್ದರ್ಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಣೆ ಕಡಿಮೆ ಆಗಿದೆ. ಆದ್ದರಿಂದ ನೀರು ಸರಬರಾಜು ಸಹ ಅನಿಯಮಿತವಾಗಿದೆ. ಇದರಿಂದ ನೀರಿನ ಅಭಾವ ಹೆಚ್ಚಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.